ವಿಚಿತ್ರ ಕರು ಜನನ: 48 ಗಂಟೆಯೊಳಗೆ ಸಾವು

ದಾವಣಗೆರೆ, ಮೇ.01: ಹಸುವೊಂದು ವಿಚಿತ್ರವಾದ ಕರುವಿಗೆ ಜನ್ಮ ನೀಡಿದ್ದು, ಜನಿಸಿದ 48 ಯೊಳಗೆ ಕರು ಮೃತ ಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ತಾವರೆಕರೆ ಗ್ರಾಮದಲ್ಲಿ ನಡೆದಿದೆ.ತಾವರಕೆರೆ ಗ್ರಾಮದ ಕೃಷ್ಣಎಂಬುವರಿಗೆ ಸೇರಿದ ಹಸು ತಲೆಯೊಂದು ನಾಲ್ಕು ಕಣ್ಣು, ಎರಡು ಕಿವಿ, ಎರಡು ಮುಖ ಹೊಂದಿರುವ ವಿಚಿತ್ರವಾದ ಕರುವಿಗೆ ಜನ್ಮನೀಡಿದೆ.ಹಸು ನರಳಾಡುತ್ತಿರುವುದನ್ನು ಗಮನಿಸಿದ ಹಸುವಿನ ಮಾಲೀಕ ಕೃಷ್ಣ ಅವರು ಕೂಡಲೇ ಪಶು ವೈದ್ಯಾಧಿಕಾರಿ ಡಾ.ಬಸವಂತಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಧಾವಿಸಿದ ವೈದ್ಯಾಧಿಕಾರಿಗಳು, ಗರ್ಭಧಾರಣೆ ಮಾಡಿಸಿದಾಗ ಇಂತಹ ಕರು ಜನಿಸಿದೆ. ಆದರೆ ಜನಿಸಿ 48 ಗಂಟೆಯೊಳಗೆ ಉಸಿರಾಟ ಹೆಚ್ಚಾಗಿ ಸಾವನ್ನಪ್ಪಿದೆ.1ಲಕ್ಷಕ್ಕೊಂದು ಇಂತಹ ಪ್ರಕರಣಗಳು ಕಂಡು ಬರುತ್ತಿವೆ. ಕಾರಣ ಅನುವಂಶೀಯ ತೊಂದರೆಯಿಂದ ಹಸುಗಳು ಇಂತಹ ಕರುವಿಗೆ ಜನ್ಮ ನೀಡುತ್ತವೆ ಎಂದು ಪಶು ವೈದ್ಯಾಧಿಕಾರಿ ಡಾ.ಬಸವಂತಪ್ಪ ತಿಳಿಸಿದ್ದಾರೆ.
ಹಸು ವಿಚಿತ್ರವಾದ ಕರುವಿಗೆ ಜನ್ಮನೀಡಿರುವ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಮಾಲೀಕನ ಮನೆಗೆ ಬಂದು ಕರು ನೋಡಿ ಮಮ್ಮಲ ಮರುಗಿದ್ದಾರೆ.