ವಿಚಾರ ಸಂಕೀರ್ತನೆ 20 ರಂದು

ಕಲಬುರಗಿ,ಮಾ. 18: ವಿಶ್ವ ಮಧ್ವಮಹಾ ಪರಿಷತ್‍ನ ಅಂಗ ಸಂಸ್ಥೆಯಾದ ವ್ಯಾಸ ಸಾಹಿತ್ಯ ವಿಚಾರ ವಾಹಿನಿಯಿಂದ ನಗರದ ಜೇವರಗಿ ಕಾಲೋನಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾ. 20ರಂದು ಸಂಜೆ 6ಕ್ಕೆ ವಿಚಾರ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ ಎಂದು ವಾಹಿನಿ ಸಂಚಾಲಕ ರವಿ ಲಾತೂರಕರ್ ತಿಳಿಸಿದ್ದಾರೆ.
ವಾಹಿನಿ ಅಧ್ಯಕ್ಷ ಪಂ. ಗೋಪಾಲಾಚಾರ್ಯ ಅಕಮಂಚಿ ಅವರು ಭೋಜನ ಪದ್ಧತಿ ಕುರಿತು ವಿಚಾರ ಮಂಡಿಸಲಿದ್ದು, ಪಾರಾಯಣ ಸಂಘದ ಸದಸ್ಯರು ಭೋಜನ ಪದ್ಧತಿ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.