ವಿಚಾರ ಪತ್ನಿಯಾಗಿ ನೀಲಾಂಬಿಕೆ ಬೆಳೆಯಲು ಶರಣರ ಅನುಭಾವಗೋಷ್ಠಿಗಳೇ ಕಾರಣ


ಸಂಜೆವಾಣಿ ವಾರ್ತೆ
ಸಂಡೂರು: ಜು: 29  ಶಿವಯೋಗ ಸಾಧನೆ ಮಾಡುವ ಮೂಲಕ ಶರಣರ ಅನುಭಾವಗೋಷ್ಠಿಗಳಲ್ಲಿ ಭಾಗವಹಿಸಿ ಶರಣರ ಆಗುಹೋಗುಗಳನ್ನು ನೋಡುವುದರ ಜೊತೆಗೆ ಶರಣರ ಸಂಪರ್ಕದಲ್ಲಿದ್ದ ನೀಲಾಂಬಿಕೆ ಬಸವಣ್ಣನವರಿಗೆ ವಿಚಾರಪತ್ನಿಯಾಗಿ ಬೆಳೆಯಲು ಕಾರಣ ಬಸವಣ್ಣನವರಿಗೆ ಗಂಗಾಂಬಿಕೆ , ನೀಲಾಂಬಿಕೆ ಎನ್ನುವ ಇಬ್ಬರು ಪತ್ನಿಯರಿದ್ದು, ಗಂಗಾಂಬಿಕೆ ಬಸವಣ್ಣನವರ ಅದೇಶವನ್ನು ಪಾಲಿಸಿ ಉತ್ತಮ ಪತ್ನಿಯಾಗಿ ಅಕ್ಕನಾಗಮ್ಮನವರಿಗೆ ಪ್ರೀತಿಯ ಮಗಳಾಗಿ ಬೆಳೆದಳು, ಗಂಗಾಂಬಿಕೆ ಮತ್ತು ನೀಲಾಂಬಿಕೆ ಬಸವಣ್ಣನವರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಗಂಗಾಂಬಿಕೆ ಬ್ರಾಹ್ಮಣ ಸಂಪ್ರದಾಯದವರಾದರೂ ಬಸವಣ್ಣನವರಿಗೆ ವಿಧೇಯಕ ಪತ್ನಿಯಾದರು ವಿಚಾರವಂತ ಪತ್ನಿಗೂ , ಪತ್ನಿಗೂ ಅಜಗಜಾಂತರ ವ್ಯತ್ಯಾಸವಿದೆ, ನೀಲಾಂಬಿಕೆಗೆ ಲಿಂಗಪೂಜೆ ನಿಷ್ಠೆ ಇತ್ತು ಬಾಲ ಸಂಗಯ್ಯನೆನ್ನುವ ಓರ್ವ ಪುತ್ರನಿದ್ದ, ಸಂಗನಬಸವಯ್ಯ, ಎನ್ನವ ನಾಮಾಂಕಿತದಿಂದ 287 ವಚನಗಳನ್ನು 12 ಸ್ವರ ವಚನಗಳನ್ನು ಸಾಹಿತ್ಯದ ಮೂಲಕ ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರಲ್ಲಿ ಪ್ರಮುಖರು ಎಂದು ಚಿತವಾಡ್ಗಿ ಸರ್ಕಾರಿ ಪ್ರೌಢಶಾಲೆ ನಿವೃತ್ತ ಶಿಕ್ಷಕಿ, ಶಾಸಪ ಅಧ್ಯಕ್ಷರು ಹೊಸಪೇಟೆಯವರಾದ ಹೆಚ್.ಎಸ್. ಸೌಭಾಗ್ಯ ಲಕ್ಷ್ಮೀಯವರು ತಿಳಿಸಿದರು.
ಅವರು ಪಟ್ಟಣದ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಅಕ್ಕನಬಳಗ ಸಹಯೋಗದಲ್ಲಿ ಪ್ರಭುಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಅಕ್ಕನಬಳಗದ ಅಧ್ಯಕ್ಷೆ ಜ್ಯೋತಿ ಗುಡೇಕೋಟೆ ನಾಗರಾಜ ಅಧ್ಯಕ್ಷತೆಯಲ್ಲಿ ಉಪನ್ಯಾಸವನ್ನು ನೀಡದರು. ವಿಚಾರದಿಂದ ಕೂಡಿದ ಆಚಾರಗಳು ಮುಖ್ಯ ಅರಿವಿನ ವಿಚಾರದ ಜೊತೆಗೆ ಅನುಭಾವ ಬಹಳ ಮುಖ್ಯ, ನಾನು ದೇಹ ಎನ್ನುವ ಮಾತುಹೋಗಿ ನಾನು ಆತ್ಮ ಒಳಗೆ ಸುಳಿವ ಆತ್ಮ ಗಂಡೂ ಅಲ್ಲ, ಹೆಣ್ಣು ಅಲ್ಲ ಎನ್ನುವ ಭಾವನೆ ಬಂದವರೆ ನಿಜವಾದ ಶರಣರು, ಅನುಭಾವಕ್ಕೂ ಅನುಭವಕ್ಕೆ ಅಜಗಜಾಂತರ ವ್ಯತ್ಯಾಸವಿದೆ ದೇಹಭಾವನೆಯನ್ನು ತೊರೆದವರು ಶರಣರು, ಲಿಂಗಪೂಜೆಗೆ ಅಯತವನ್ನು ಕೊಟ್ಟವರು ಶರಣರು ಇಬ್ಬರೂ ಸಮಾನರು ಎಂದು ಸಾರಿದರು. ಕರ್ನಾಟಕದಲ್ಲಿ ವರ್ಣಬೇಧ, ಜಾತಿಭೇಧ ಇವುಗಳಾವು ಇರಲಿಲ್ಲ, ಆದರೆ ಬೇರೆ ಕಡೆ ಹೋದರೆ ಇವುಗಳನ್ನು ನಾವು ಕಾಣುತ್ತೇವೆ, ಇದು ಕರ್ನಾಟಕದಲ್ಲಿ ಮಾತ್ರ ಬಸವತತ್ವ ಉಳಿದಿದೆ. ಉತ್ತಂಗಿ ಚನ್ನಪ್ಪನವರು , ಫ.ಗು. ಹಳಕಟ್ಟಿಯವರು ಸಮಾನಮನಸ್ಕರು ಉತ್ತಂಗಿ ಚನ್ನಪ್ಪನವರು ಕ್ರೈಸ್ತ ಧರ್ಮ ಪಾದ್ರಿಯಾದರೂ ಅನುಭವ ಮಂಟಪದ ಸ್ಥಾಪಕರಲ್ಲಿ ಪ್ರಮುಖರು ಎಂದು ತಿಳಿಸಿದರು. ನೀಲಾಂಬಿಕೆಯವರು ಅವ್ವನಾಗಿ, ಅಕ್ಕನಾಗಿ, ಬಸವಣ್ಣನವರ ಅಸ್ಥಾನದಲ್ಲಿ ಬೆಳೆದರು.
ದೇವಸ್ವರೂಪವನ್ನು ಸೃಷ್ಟಿಸಿದವರು ಶರಣರು ಮಹಿಳೆಗೆ ಪುರುಷನಂತೆ ಲಿಂಗಧಾರಣೆ ಇರಲಿಲ್ಲ ಇಬ್ಬರೂ ಸಮಾನರು ಎಂದು ಸಾರಿದರು. ವಚನಗಳನ್ನು ಬರೆದವರೆಲ್ಲರೂ ಸಮಾನಮನಸ್ಕರಲ್ಲ ಹರಿಹರನ ರಗಳೆಯಲ್ಲಿ ನೀಲಾಂಬಿಎಕಯನ್ನು ಮಯಾದೇವಿ ಎಂದು ಬರೆದಿದ್ದಾರೆ, ಲಕ್ಕಣ ದಂಡೇಶನ ಚರಿತ್ರೆಯಲ್ಲಿ ಬಿಜ್ಜಳನ ತಂಗಿ ಗಂಗಾಂಬಿಕೆ ಪುರಾಣಗಳಲ್ಲಿ ಸಾಕು ಮಗಳು ಎನ್ನುವ ಉಲ್ಲೇಖ ಇದೆ, ಬಸವಣ್ಣನವರ ಕಾಲದಲ್ಲಿ ನೀಲಾಂಬಿಕೆಯವರ ಪ್ರಭಾವ ಬಹಳವಾಗಿತ್ತು. ಬಿಜ್ಜಳ ಅರಸನ ಮನೆಯಲ್ಲಿ ಬೆಳೆದ ನೀಲಾಂಬಿಕೆ ಉತ್ತಮ ಶಿಕ್ಷಣ ಹೊಂದಿದ್ದರು ಎಂದು ತಿಳಿಸಿದರು. ನರಿಸಬಸವರಾಜ ಕಮ್ಮಾರ ಉಮೇಶ್ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗುಡೇಕೋಟೆ ನಾಗರಾಜ ಶರಣಪ್ಪ ಕರಿಮಟ್ಟಿ ಬಿ.ಅರ್.ಸಿ. ಜಗದೀಶ್ ಎಸ್ ಬಸಾಪುರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಸುಭಾಷ್ ಸಿಂಧೆ, ನಾಗರಾಜ ನರಸಾಪುರ, ಕಲ್ಪನಾ ಗುಡೇಕೋಟೆ, ಬಂಡೆಮ್ಯಾಗಳ ಗಂಗಮ್ಮ, ಉಗ್ರಾಣದ ವಿಶಾಲಾಕ್ಷಿ, ಶಾಂತಲಾ ಪ್ರಭುರಾಜ ಅಂಕಮನಾಳ್, ಪ್ರದೀಪ್ ಶಿಕ್ಷಕ ಶಾಂತಮ್ಮ ಚರಂತಯ್ಯಮಟ ಐರಣಿ ಮಠದ ಗಿರಿಜಮ್ಮ ಹಗರಿಬಸವರಾಜಪ್ಪ ಉಪಸ್ಥಿತರಿದ್ದರು. 

One attachment • Scanned by Gmail