ವಿಘ್ನ ನಿವಾರಕ ಶ್ರೀ ಗಣೇಶ ಹಬ್ಬದ 5 ನೇ ದಿನ ವಿಸರ್ಜನೆ

ಜೇವರ್ಗಿ:ಸೆ.5: :ಪಟ್ಟಣದಲ್ಲಿ ಹಾಗೂ ಸೊನ್ನ, ಅರಳಗುಂಡಗಿ, ಯತ್ನಾಳ ಸೆವರಿದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡ ಪೂಜೆ ಹಾಗೂ ಕಾರ್ಯಕ್ರಮದಲ್ಲಿ ಜೇವರ್ಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ರವರು ಭಾಗವಹಿಸಿ ವಕ್ರತುಂಡ ಗಜಾನನ ಆಶಿರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕಾಶೀಂ ಪಟೇಲ್ ಮುದಬಾಳ, ಚಂದ್ರಶೇಖರ್ ಪುರಾಣಿಕ್, ಚಂದ್ರಶೇಖರ್ ಹರನಾಳ, ವಿಜಯಕುಮಾರ್ ಪಾಟೀಲ ಕಲ್ಲಹಂಗರಗಾ, ಬಾಪುಗೌಡ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ಹಲಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.