ವಿಕ್ರಾಂತ್ ರೋಣ ಅಬ್ಬರ ಆರಂಭ…

ಬಾದ್ ಶಾ  ಕಿಚ್ಚ ಸುದೀಪ್ ಅಭಿನಯದ ” ವಿಕ್ರಾಂತ್ ರೋಣ” ವಿಶ್ವದೆಲ್ಲೆಡೆ ತೆರೆಯ ಮೇಲೆ ಆರ್ಭಟಿಸಿದೆ. ಈ ಮೂಲಕ ಜಗತ್ತಿನ ಹಲವೆಡೆ ಹೊಸ ನಾಯಕನ್ನು ಅದ್ದೂರಿಯಾಗಿ ಬರಮಾಡಿಕೊಂಡಿದೆ.

ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ  ಚಿತ್ರ ತೆರೆಗೆ ಬಂದಿದೆ.ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರ ಗಡಿಯಾಚೆ, ತೆರೆ ಕಾಣುವ ಮೂಲಕ ದಾಖಲೆ ಬರೆದಿದೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ  ಕಿಚ್ಚ ಸುದೀಪ್,  ಅಭಿಮಾನಿಗಳು ತೋರಿಸಿರುವ ಪ್ರೀತಿಗೆ ” ಲವ್ ಯೂ ” ಎಂದಷ್ಟೇ ಹೇಳಬಲ್ಲೆ.ಜೊತೆಗೆ ಪತ್ರಕರ್ತರು ತೋರುತ್ತಿರುವ ಪ್ರೀತಿಯಿಂದ ವಿಕ್ರಾಂತ್ ರೋಣ ಈ ಮಟ್ಟದಲ್ಲಿ ಸದ್ದು ಮಾಡಿದೆ.ನೀವು ನನ್ನನ್ನು ಪ್ರೀತಿಸಿದ್ದೀರಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಮುಂದೆಯೂ ಕೂಡ. ನಿಮ್ಮ ಪ್ರೀತಿ ಅಭಿಮಾನ ಹೀಗೆ ಇರಲಿ ಎಂದರು.

ನಾನೇ ನಿರ್ಮಾಣ ಮಾಡಿದ್ದರೂ ವಿಕ್ರಾಂತ್ ರೋಣ ಚಿತ್ರವನ್ನು ಈ ಮಟ್ಟಕ್ಜೆ ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ.ಅದಕ್ಕೆ ಕಾರಣ ಜಾಕ್ ಮಂಜು. ಚಿತ್ರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ‌ನಿರ್ದೇಶಕ ಶಿವಕುಮಾರ್ ನಿಜವಾದ ಹೀರೋ ಗಳು.ಈ ಎಲ್ಲಾ ಹೀರೋಗಳ ಹೀರೋ ಜಾಕ್ ಮಂಜು.ಆ ನಂತರ ನಾನು   ನಿರ್ದೇಶಕರು ಯಾವ ರೀತಿ ಕಾಣಬೇಕು ಎಂದು ಬಯಸುತ್ತಾರೋ‌ ಆ ರೀತಿ ಕಾಣಿಕೊಳ್ಳುತ್ತೇನೆ ಎನ್ನುವ ವಿವರ ನೀಡಿದರು.

ಚಿತ್ರದ ಕಥೆಯನ್ನು ಮೊದಲು ಇಷ್ಟಪಟ್ಟಿದ್ದು ಪತ್ನಿ ಪ್ರಿಯಾ, ನಿರ್ಮಾಪಕ ಮಂಜು.ಆ ನಂತರ ನಿರ್ದೇಶಕ ಅನೂಪ್ 6 ಗಂಟೆಗಳ ಕಾಲ ಸಂಗೀತ ಜೊತೆ ಕತೆ ಹೇಳಿದರು ಥ್ರಿಲ್ ಆಗಿ ನಟಿಸಲು ಒಪ್ಪಿಕೊಂಡೆ ಎಂದರು.

ನಟ ಉಪೇಂದ್ರ ಮಾತನಾಡಿ, ಕನ್ನಡಿಗರು ನಾವು ಯಾವುದರಲ್ಲಿ ಕಡಿಮೆ ಇಲ್ಲ ಎಂದು ದೇಶಾದ್ಯಂತ ನಿರೂಪಿಸಿದರು.ಇದೀಗ ಸುದೀಪ್ ಜಗತ್ತಿನಾದ್ಯಂತ ಅರ್ಭಟಿಸುವ ಮೂಲಕ  ಪ್ಯಾನ್ ಇಂಡಿಯಾ ಅಲ್ಲ ಜಗತ್ತಿನಾದ್ಯಂತ ಸ್ಟಾರ್ ಆಗಿದ್ದಾರೆ.ವಿಕ್ರಾಂತ್ ರೋಣ ವಿಕ್ಟರಿ ರೋಣ ಆಗಲಿ ಎಂದು ಶುಭ ಹಾರೈಸಿದರು

ನಿರ್ದೇಶಕ ಅನೂಪ್ ಭಂಡಾರಿ, ಸುದೀಪ್ ಅವರನ್ನು ಹೇಗೆ ತೋರಿಸಿದರೂ   ತೋರಿಸಿದರೂ ಚೆನ್ನಾಗಿ ಕಾಣ್ತಾರೆ ಚಿತ್ರಕ್ಕೆ ಬೆಂಬಲವಿರಲಿ ಎಂದರು

ನಟನಿರೂಪ್ ಭಂಡಾರಿ ,ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 27 ವರ್ಷ ಆಗಿದೆ. ಇದುವರೆಗೂ ಒಂದು ಲೆಕ್ಕೆ ಇನ್ನೂ ಮುಂದೆ ಮತ್ತೊಂದು ಲೆಕ್ಕ  ಅಣ್ಣನ ಜೊತೆ ಕೆಲಸಮಾಡುವುದು ತುಂಬಾ ಸುಲಭ, ಎಂದರೆ ನೀತಾ ಆಶೋಕ್, ಧನ್ಹವಾದಗಳು ಎಂದರು

ಶಾಸಕ ಉದಯ್ ಗರುಡಾಚಾರ್, ಕಲಾ‌ನಿರ್ದೇಶಕ  ಶಿವಕುಮಾರ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್,,ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಸೇರಿದಂತೆ ಅನೇಕ ಮಂದಿ ಶುಭ ಹಾರೈಸಿದರು.