ವಿಕ್ರಾಂತ್ ರೋಣಾ ಆಗಮನಕ್ಕೆ ಮುಹೂರ್ತ

* ಚಿಕ್ಕನೆಟಕುಂಟೆ ಜಿ.ರಮೇಶ್

ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗಿರುವ ನಡುವೆ ಕಿಚ್ಚ ಸುದೀಪ್ ,ಬಹು ನಿರೀಕ್ಷಿತ “ವಿಕ್ರಾಂತ್ ರೋಣಾ” ಚಿತ್ರ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದು ಸಹಜವಾಗಿ ಸುದೀಪ್ ಅವರ ಅಭಿಮಾನಿಗಳಲ್ಲಿ ಕುತೂಹಲಹೆಚ್ಚುವಂತೆ ಮಾಡಿದೆ.

ಬಾದ್‌ಶ ಕಿಚ್ಚ ಸುದೀಪ್,ಚಿತ್ರರಂಗಕ್ಕೆ ಬಂದು 25 ವರ್ಷ ಪೂರ್ಣಗೊಳಿಸಿದ ಸಮಯದಲ್ಲಿ ಈ ಚಿತ್ರ ಅಭಿಮಾನಿಗಳಿಗೆ ಉಡುಗೊರೆ ರೂಪದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಯ ಮೇಲೆ ಬರುವ ಎಲ್ಲಾ ಸಾಧ್ಯತೆಗಳಿವೆ.

ಬಹುಭಾಷೆಯ ಚಿತ್ರ ಆಗಿರುವ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಮುಂಚೆಯೇ ಪ್ರಕಟಿಸಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್19 ರಂದು ತೆರೆಗೆ ಬರಲಿದೆ.

ರಾಜ್ಯ ಮತ್ತು ದೇಶದಲ್ಲಿ ಸದ್ಯ ಕೊರೊನಾ ಸೋಂಕಿನ ಪರಿಸ್ಥಿತಿ ನೋಡಿಕೊಂಡು ವಿಂಕ್ರಾಂತ್ ರೋಣಾ ತೆರೆಯ ಮೇಲೆ ಅಪ್ಪಳಿಸಲಿದೆ. ಚಿತ್ರ ಕನ್ನಡ, ತೆಲುಗು,ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿದ್ದವಾಗಿದೆ.ಜೊತೆಗೆ ಜಗತ್ತಿನ 55 ದೇಶಗಳಲ್ಲಿ 14 ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಎಲ್ಲವೂ ಸದ್ಯದ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ.

ಕಿಚ್ಚ ಸುದೀಪ್ ಚಿತ್ರರಂಗದ ಸಿನಿಮಾಯಾನದಲ್ಲಿ ಅತಿದೊಡ್ಡ ಬಜೆಟ್‌ನಿಂದ ಕೂಡಿದ ಆಕ್ಷನ್ ಮತ್ತು ಅಡ್ವೆಂಚರ್ ಚಿತ್ರ ಇದಾಗಿದೆ. ಈ ಕುರಿತು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಜಾಕ್ ಮಂಜು, ಮೊದಲಿನಿಂದಲೂ ಚಿತ್ರವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಬೇಕೆಂದು ಪ್ಲಾನ್ ಮಾಡಿಕೊಂಡು ದಿನಾಂಕ ಪ್ರಕಟಿಸಿದ್ದೇವೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು ಎಡಿಟಿಂಗ್ ಪೂರ್ಣಗೊಂಡಿದೆ. ಡಬ್ಬಿಂಗ್ ಕೂಡ ಆರಂಭವಾಗಿದೆ. ಬಾಕಿ ಇರುವ ಹಾಡನ್ನು ಚಿತ್ರ ಬಿಡುಗಡೆಗೆ ಮುನ್ನ ಚಿತ್ರೀಕರಿಸುತ್ತೇವೆ ಎಂದರು.

ವಿಕ್ರಾಂತ್ ರೋಣಾ ಚಿತ್ರ 2ಡಿ ಮತ್ತು 3ಡಿಯಲ್ಲಿ ಬರಲಿದೆ. ಚಿತ್ರವನ್ನು 125 ಕ್ಕೂ ಹೆಚ್ಚು ದಿನ ಚಿತ್ರೀಕರಣ ಮಾಡಲಾಗಿದೆ. ಪ್ರೇಕ್ಷಕರನ್ನು ರಂಜಿಸಲು ಚಿತ್ರವನ್ನು ತೆರೆಯ ಮೇಲೆ ತರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ಹಲವು ಕಲಾವಿದರ ದೊಡ್ಡ ಬಳಗವೇ ಇದೆ, ಸುದೀಪ್ ಚಿತ್ರ ಜೀವನಲ್ಲಿ ಮತ್ತೊಂದು ಮೈಲುಗಲ್ಲು ಆಗಲಿದೆ ಎಂದರು.

ಜನರ ಉದಾಸೀನತೆಯಿಂದ ಸೋಂಕು ಹೆಚ್ಚಳವಾಗುತ್ತಿದೆ. ಜನರು ಮುನ್ನೆಚ್ಚರಿಕೆ ಕ್ರಮ ಕೊಳ್ಳಬೇಕಾಗಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಂದು ಜನರಲ್ಲಿ ಅವರು ಮನವಿ ಮಾಡಿದರು.

ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದಾರೆ. ರಂಗಿತರಂಗ ಚಿತ್ರದ ಮೂಲಕ ಛಾಯಾಗ್ರಾಹಣದಲ್ಲಿ ಮೋಡಿ ಮಾಡಿದ್ದ ವಿಲಿಯಂ ಡೇವಿಡ್ ವಿಕ್ರಾಂತ್ ರೋಣನಿಗೆ ಕ್ಯಾಮರ ಕೈಚಳಕ ತೋರಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದೆ.

ಚಿತ್ರದಲ್ಲಿ ಚಿಕ್ಕ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತಿತರಿದ್ದಾರೆ.

ಆಗಸ್ಟ್ ನಲ್ಲಿ ತೆರೆಗೆ

ಎಲ್ಲಾ ಅಂದುಕೊಂಡಂತೆ ಆದರೆ ವಿಕ್ರಾಂತ್ ರೋಣಾ ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಕಿಚ್ಚ ಸುದೀಪ್ ಚಿತ್ರ ಜೀವನದ ಮತ್ತೊಂದು ಮೈಲುಗಲ್ಲು ಆಗಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.