ವಿಕ್ಕಿ ಕೌಶಲ್ – ಕತ್ರೀನಾ ಕೈಫ್ ವಿಚ್ಛೇದನ-ವೈರಲ್

ಮುಂಬೈ (ಮಹಾರಾಷ್ಟ್ರ). ಮೇ೧೬:ಇತ್ತೀಚೆಗಷ್ಟೇ ಹಸೆಮಣೆ ಏರಿದ ಬಾಲಿವುಡ್‌ನ ಕ್ಯೂಟ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ವಿಚ್ಛೇದನ ಪಡೆಯಲಿದ್ದಾರಾ ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದು ನಿಜ ಅಲ್ಲದಿದ್ದರೂ ಅಸಲಿ ಕಾರಣವೇ ಬೇರೆ ಇದೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅರೆಕ್ಷಣ ಉತ್ತರಿಸಲಾಗದೇ ತಬ್ಬಿಬ್ಬಾದ ವಿಕ್ಕಿ ಕೌಶಲ್ ಏನಂದ್ರು ಗೊತ್ತಾ ’ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ಪ್ರಚಾರದಲ್ಲಿದ್ದ ಬಾಲಿವುಡ್ ನಟ ವಿಕ್ಕಿ ಕೌಶಲ್‌ಗೆ ಪತ್ರಕರ್ತರೊಬ್ಬರು ವಿಚ್ಛೇದನ ಕುರಿತಾಗಿ ಕೇಳಲಾದ ಪ್ರಶ್ನೆಗೆ ತಬ್ಬಿಬ್ಬಾದ ಪ್ರಸಂಗ ನಡೆದಿದೆ.
ಹೌದು, ’ಜರಾ ಹಟ್ಕೆ ಜರಾ ಬಚ್ಕೆ’ ಟ್ರೇಲರ್ ಬಿಡುಗಡೆ ವೇಳೆ ವರದಿಗಾರೊಬ್ಬ ಮಾತಿನ ಮಧ್ಯದಲ್ಲಿ ಕತ್ರಿನಾ ಕೈಫ್ ಅವರಿಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ ಡಿವೋರ್ಸ್ ನೀಡುತ್ತೀರಾ’ ಎಂದು ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ ಘಟನೆ ನಡೆಯಿತು. ಮಾತಿನ ಮಧ್ಯದಲ್ಲಿ ಪತ್ರಕರ್ತರಿಂದ ತೂರಿಬಂದ ಈ ಗೂಗ್ಲಿ ಪ್ರಶ್ನೆಗೆ ಉತ್ತರಿಸಲಾಗದೇ ಅರೆಕ್ಷಣ ತಡಬಡಿಸಿದ ವಿಕ್ಕಿ ಕೌಶ, ಗೊಂದಕ್ಕೀಡಾದರು.ಪತ್ರಕರ್ತರ ಪ್ರಶ್ನೆಯನ್ನು ತಮಾಷೆಯಾಗಿ ತೆಗೆದುಕೊಂಡ ವಿಕ್ಕಿ ಕೌಶಲ್ ಸ್ವಲ್ಪ ಸಮಯದ ಬಳಿಕ ಸರ್… ನಾನು ಸಂಜೆ ಮನೆಗೆ ಹಿಂತಿರುಗಬೇಕು! ನೀವು ಇಂತಹ ಗೂಗ್ಲಿ ಮತ್ತು ಟ್ರಿಕಿ ಪ್ರಶ್ನೆಗಳನ್ನು ಕೇಳಿದರೆ ನಾನು ಏನೆಂದು ಉತ್ತರ ನೀಡಬೇಕು ಇಂತಹ ವಿಷಯದಲ್ಲಿ ನಾನಿನ್ನು ತುಂಬಾ ಚಿಕ್ಕವನು. ಅಲ್ಲದೇ ನಾನಿನ್ನು ಬಾಲಿವುಡ್‌ನಲ್ಲಿ ಬೆಳೆಯುತ್ತಿರುವ ಮಗು, ಬೆಳೆಯಲು ಬಿಡಿ. ನಿಮ್ಮ ಅಪಾಯಕಾರಿ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ಹಾಸ್ಯ ಚಟಾಕೆ ಹಾರಿಸಿದರು.