ವಿಕೇಂಡ್ ಕಫ್ರ್ಯೂ ಆಲಮೇಲ ಪಟ್ಟಣ ಸ್ಥಬ್ಧ

ಆಲಮೇಲ:ಎ.25:ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರಕಾರ ವೀಕೆಂಡ್ ಕಫ್ರ್ಯೂ ಜಾರಿಗೆ ಮಾಡಿದ ಮೊದಲನೆ ದಿನ ಶನಿವಾರ ಪಟ್ಟಣದಲ್ಲಿ ಬಂದ ಯಶಸ್ವಿವಾಗಿದು, ಜನರು ಮತ್ತು ವ್ಯಾಪಾರಸ್ಥರು ಸ್ವಯಂ ಬಂದ ಮಾಡಿ ಸರಕಾರದ ಆದೇಶ ಪಾಲಿಸಿದ್ದಾರೆ.

ಶನಿವಾರ ಮುಂಜಾನೆ ಅಗತ್ಯವಾದ ವಸ್ತ್ತುಗಳ ಅಂಗಡಿಗಳು ಬೆಳಿಗ್ಗೆ 10 ಗಂಟೆಯವರೆಗೆ ತೆರೆದು ವ್ಯಾಪಾರ ಮಾಡಿದ್ದು ನಂತರ ಸ್ಥಳೀಯ ಪೊಲೀಸರು ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿಗಳು ಬಂದ ಮಾಡಲು ತಿಳುವಳಿಕೆ ಹೇಳುವಷ್ಟರಲ್ಲಿ ಜನರು ತಮ್ಮ ಎಲ್ಲಾ ಅಂಗಡಿಗಳು ಬಂದ ಮಾಡಿ ಅಧಿಕಾರಿಗಳಿಗೆ ಸಹಕರಿಸಿದ್ದಾರೆ.

ರಾಜ್ಯದಾದ್ಯಂತ ವಿಕೇಂಡ್ ಕಫ್ರ್ಯೂ ಜಾರಿ ಇದ್ದ ಕಾರಣ ಪಟ್ಟಣದ ಬಸ್ ನಿಲ್ದಾಣವು ಸಹ ಸಂಪೂರ್ಣವಾಗಿ ಸ್ಥಬ್ದವಾಗಿತ್ತು, ಬಸ್ ಸಂಚಾರವಿದ್ದರೂ ಪ್ರಯಾಣಿಕರು ಮಾತ್ರ ಬೆರಳೆಣಿಕೆಯಷ್ಟು ಇದ್ದರು. ಒಂದು ವಾರದ ಹಿಂದೆ ಅಷ್ಟೇ ಬಸ್‍ಗಾಗಿ ಕಾದು ಕುಳಿತ ಜನರು ಈಗ ಕರೋನಾ ನೆರಳಿಗೆ ಭಯ ಪಟ್ಟು ಹೊರಗಡೆ ಬರದೇ ಇರುವುದು ಮಾತ್ರ ಸತ್ಯವಾಗಿದೆ.

ಪಟ್ಟಣದಲ್ಲಿ ಹಾಲು, ತರಕಾರಿ, ದಿನಸಿ ಅಂಗಡಿಗಳು ಮಾತ್ರ ಮುಂಜಾನೆ ತೆರದಿದ್ದು ಉಳಿದ ಯಾವದೇ ಅಂಗಡಿಗಳು ಮುಂಗಟ್ಟು ತೆರೆದಿರಲಿಲ್ಲ, ಶುಕ್ರವಾರ ವಾರದÀ ಸಂತೆ ಮುಗಿಸಿಕೊಂಡು ಅಂಗಡಿ ಬಂದ ಮಾಡಿದ ವ್ಯಾಪಾರಸ್ಥರು ಅಂಗಡಿಗಳು ಸೋಮವಾರ ಮುಂಜಾನೆ 7 ಗಂಟೆಗೆ ತೆರೆಯಲು ಎಲ್ಲಾರೂ ಸಿದ್ದರಾಗಿದ್ದು, ಕಳೆದ ವರ್ಷದ ಲಾಕಡೌನ್‍ನಲ್ಲಿ ಅಂಗಡಿ ಮಾಲೀಕರು ಬಂದ ಮಾಡಲು ಹಿಂದೆಟ್ಟು ಹಾಕುತ್ತಿರುವುದು ನೋಡಿದರೆ ಈ ಎರಡನೆ ಅಲೆಗೆ ಬೆಂಬಲ ನೀಡುವುದು ಕಷ್ಟ ಎಂದು ಕೊಂಡಿದ್ದ ಅಧಿಕಾರಿಗಳಿಗೆ ಜನರು ಮಾತ್ರ ಸ್ವಯಂ ಬಂದ ಮಾಡುವ ಮೂಲಕ ಬದಲಾಗಿದ್ದಾರೆ ಎನ್ನುವುದು ಮಾತ್ರ ಸತ್ಯ ಸಂಗತಿಯಾಗಿದೆ.