ವಿಕೆಂಡ್ ಕರ್ಫೂಗೆ ಉತ್ತಮ ಪ್ರತಿಕ್ರಿಯೆ

ಕೋಲಾರ,ಏ.೨೬: ಕೊರೊನಾ ವೀಕೆಂಟ್ ಕರ್ಫ್ಯೂವನ್ನ ತರಬೇತಿ ಪೊಲೀಸರು ಉಲ್ಲಂಘಟನೆ ಮಾಡಿದ್ದಾರೆ. ಎಲ್ಲೆಡೆ ಕಟ್ಟಿನಿಟ್ಟಿನ ವಿಕೆಂಡ್ ಕರ್ಫ್ಯೂವಿಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ಸಿಕ್ಕಿತ್ತು.
ಪೊಲಿಸರು ಬಿಗಿ ಬಂದೋಬಸ್ತ್ ನಲ್ಲಿ, ಪೊಲೀಸರ ಲಾಠಿ ಚಾರ್ಜ್ ಭಯದಲ್ಲಿ ಜನಸಾಮಾನ್ಯರು ರಸ್ತೆಗಿಳಿದಿರಲಿಲ್ಲ. ರಸ್ತೆಗಿಳಿದ ನೂರಾರು ಬೈಕ್ ಗಳನ್ನ ಸಹ ಸೀಜ್ ಮಾಡಲಾಗಿತ್ತು. ಆದರೆ ಕೋಲಾರ ನಗರದ ಕವಾಯತು ಮೈದಾನದಲ್ಲಿ ತರಬೇತಿ ಪೊಲೀಸರು ಮಾತ್ರ ಭರ್ಜರಿ ಕ್ರಿಕೆಟ್ ಆಡುತ್ತಿದ್ದದ್ದು ಕಂಡುಬಂತು. ಕೊರೊನಾ ವೀಕೆಂಡ್? ಕರ್ಪ್ಯೂ? ನಡುವೆಯೂ ಟ್ರೈನಿ ಪೊಲೀಸರುಕ್ರಿಕೆಟ್? ಆಟವಾಡುತ್ತಿದ್ದರು.
ಕವಾಯತು ಮೈದಾನದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ತರಬೇತಿ ಪೊಲೀಸರು ಆಟವಾಡುತ್ತಿದ್ದು,
ಮಾಧ್ಯಮದವರನ್ನು ಕಂಡ ನಂತರ ಅಲ್ಲಿಂದ ಜಾಗ ಖಾಲಿ ಮಾಡಿದರು. ವೀಕೆಂಡ್? ಕರ್ಪ್ಯೂ? ಉಲ್ಲಂಘನೆ ಮಾಡಿ ಆಟವಾಡುತ್ತಿದ್ದ ತರಬೇತಿ ಪೊಲೀಸರ ವಿರುದ್ದ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದರು.