ವಿಕೆಂಡ್ ಕರ್ಪ್ಯೂ , ಮನೆಯಲ್ಲಿ ಲಾಕ್ ಆದ ಜನರು

 ಜಗಳೂರು.ಏ.೨೫: ತಹಶೀಲ್ದಾರ್ ಡಾ.ನಾಗವೇಣಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಬಣಕಾರ್, ಸಿಪಿಐ ಮಂಜುನಾಥ್ ಪಂಡಿತ್ ಪೋಲೀಸ್ ಇಲಾಖೆಯ ನೇತೃತ್ವದಲ್ಲಿ ತಾಲ್ಲೂಕು ಆಡಳಿತದಲ್ಲಿ ಜಗಳೂರು ಪಟ್ಟಣದಲ್ಲಿ 10 ಗಂಟೆಯ ಮೇಲೆ ವಾಹನದ ಮೂಲಕ ಪ್ರಕಟಣೆ ಮಾಡುವ ಮೂಲಕ ಜನರು ಹೊರಗಡೆ ಬರಬಾರದೆಂಬ ಕೋವಿಡ್ ವೀಕೆಂಡ್ ಕರ್ಪ್ಯುಬಗ್ಗೆ ಎಚ್ಚರಿಸಿದರು. ಸಾರ್ವಜನಿಕರು ಬೈಕ್, ಸೇರಿದಂತೆ ಇತರೇ ವಾಹನಗಳಲ್ಲಿ ಸಂಚರಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.ವಿಕೆಂಡ್ ಕರ್ಪ್ಯೂನಿಂದಾಗಿ ಮನೆಯಲ್ಲಿ ಜನರು ಲಾಕ್ ಆಗಿದ್ದಾರೆ. ಮೆಡಿಕಲ್ ಶಾಪ್‌ಗಳು ಮಾತ್ರ ತೆರೆದಿದ್ದವು. ಅಲ್ಲೋಂದು ಇಲ್ಲೊಂದು ಸರ್ಕಾರಿ ಬಸ್ ಮಾತ್ರ ಪ್ರಯಾಣಿಸಿದ್ದು ಕಂಡು ಬಂದಿತು. ಮಹಾತ್ಮಗಾಂದಿ ಬಸ್‌ನಿಲ್ದಾಣ ಬಸ್ ಇಲ್ಲದೇ ಬಿಕೋ ಎನ್ನುತ್ತಿತ್ತು. ಇಷ್ಟೆಲ್ಲಾ ಎಚ್ಚರಿಕೆ ನೀಡಿದ್ದರೂ ಸಹ ಮದ್ಯಾಹ್ನನದ ನಂತರ ಅಲ್ಲೊಂದು ಇಲ್ಲೊಂದು ಅಪ್ಪೆ ಗಾಡಿ, ಕಾರುಗಳು, ಬೈಕ್‌ಗಳ ಮೂಲಕ ಜನರು ಓಡಾಡುತ್ತಿರುವುದು ಕಂಡು ಬಂದಿತು.ಪಿಎಸ್‌ಐ ಸಂತೋಷ ಭಾಗೋಜಿ, ಪಟ್ಟಣ ಪಂಚಾಯಿತಿಯಿ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರು ಕೋವಿಡ್ ನಿಯಮಗಳನ್ನು ಪಾಲಸಿದೇ ಗುಂಪು ಗುಂಪಾಗಿ ಕುಳಿತುಕೊಂಡರೆ ಮಕ್ಕಳು ಕ್ರೀಕೆಟ್ ಆಟದಲ್ಲಿ ತೋಡಗಿರುವುದು ಕಂಡು ಬಂತು,  ಮದ್ಯ ಮಾತ್ರ ಹೆಗ್ಗಿಲ್ಲದೇ ಮಾರಾಟವಾಯಿತು. ಕೆಲವು ಬಾಕ್ಸ್ ಗಟ್ಟೆಲೆ ತೆಗೆದು ಕೊಂಡು ಹೋಗುವುದು ಸಾಮಾನ್ಯವಾಗಿತ್ತು ಕೋವಿಡ್ ಸಭೆಯಲ್ಲಿ ರಾತ್ರಿ 7 ಗಂಟೆಗೆ ಎಲ್ಲಾ ಬಂದು ಮಾಡಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದರು ಆದರೆ ಶಾಸಕರ ಆದೇಶವನ್ನು ಅಧಿಕಾರಿಗಳು ಪಾಲಿಸದೇ ಮೈ ಮರೆತಿದ್ದರಿಂದ ಪಟ್ಟಣದಲ್ಲಿ ಬಹುತೇಕ ಬಾರ್ ಗಳಲ್ಲಿ ಮದ್ಯ ಖರಿದಿಗೆ ಜನರು ಗುಂಪು ಗುಂಪಾಗಿ ಖರಿದಿಸಿ ಸ್ಥಳದಲ್ಲಿಯೇ ಕುಡಿಯುವುದು ಸಾಮಾನ್ಯವಾಗಿತ್ತು.