
ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.02: 2022-23 ನೇ ಆರ್ಥಿಕ ವರ್ಷಾಂತ್ಯದಲ್ಲಿ ವಿಕಾಸ ಬ್ಯಾಂಕ್ ಶೇಕಡಾ 36.74ಪ್ರಗತಿಯೊಂದಿಗೆ ತನ್ನ ವಿಕಾಸಪಥವನ್ನು ಮುಂದುವರೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಹೇಳಿದರು.
ಹೊಸಪೇಟೆ ಯ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಆರ್ಥಿಕ ವರ್ಷಾಂತ್ಯದ ಪ್ರಗತಿಯನ್ನು ಹಂಚಿಕೊಂಡ ಅವರು ಕೋವಿಡ್ ಸಾಂಕ್ರಾಮಿಕದ ಪ್ರಥಮ ಸಹಜ ಆರ್ಥಿಕ ವರ್ಷ ಎಲ್ಲೆಡೆಗಳ ವ್ಯವಹಾರದಲ್ಲಿ ಚೇತರಿಕೆ ಕಂಡುಬಂದಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲೂ ಈ ಎಲ್ಲ ಪರಿಣಾಮಗಳ ಪ್ರತಿಫಲನ ಕಾಣಿಸಲಾರಂಭಿಸಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.
ವಿಕಾಸ ಬ್ಯಾಂಕಿಗೆ 9 ಹೊಸ ಶಾಖೆಗಳು: ಭಾರತೀಯ ರಿಜರ್ವ ಬ್ಯಾಂಕ್ ವಿಕಾಸ ಬ್ಯಾಂಕ್ ಹೊಸದಾಗಿ 9ಶಾಖೆಗಳನ್ನು ಅನುಮತಿ ನೀಡಿದ್ದು, ಈ ಶಾಖೆಗಳನ್ನು ತೆರೆಯಲು ಸಿದ್ಧತೆಗಳು ಆಭವಾಗಿವೆ. ಬಹುತೇಕ ಊರುಗಳಲ್ಲಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇನ್ನು ಕೆಲ ದಿನಗಳಲ್ಲಿಯೇ ಒಳಾಂಗಣ ವಿನ್ಯಾಸದ ಕಾರ್ಯ ಪ್ರಾರಂಭವಾಗಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಹತೇಕ ಈ ಎಲ್ಲ ಹೊಸ ಶಾಖೆಗಳು ಕಾರ್ಯಾರಂಭ ಮಾಡಲಿವೆ ಎಂದ ಅವರು ಉತ್ತರದ ಬೀದರನಿಂದ ಮಧ್ಯ ಕರ್ನಾಟಕದ ದಾವಣಗೆರೆಯವರೆಗೆ ವಿಕಾಸ ಬ್ಯಾಂಕಿನ 11 ಜಿಲ್ಲೆಯಲ್ಲಿ ಶಾಖೆಗಳ ಜಾಲ ಹರಡಲಿದೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಮೂಲಾಗ್ರ ಪರಿವರ್ತನೆಯ ಈ ಕಾಲದಲ್ಲಿ ತಂತ್ರಜ್ಞಾನ ಹಾಗೂ ವೃತ್ತಿಪರತೆ ಬಹಳ ಪ್ರಾಮುಖ್ಯತೆಯನ್ನು ಪಡೆದಿವೆ: ಈ ನಿಟ್ಟಿನಲ್ಲಿ ವಿಕಾಸ, ಬ್ಯಾಂಕನ್ನು ಸಜ್ಜುಗೊಳಿಸಲು ಹಾಗೂ ಸಮರ್ಥಗೊಳಿಸಲು ಮುಂದಾಗಲಿದೆ ಎಂದು ವಿವರಿಸಿದರು.
ಆರ್ಥಿಕ ವರ್ಷ 2022-23 ವರ್ಷಾಂತ್ಯದ ಅಂಕಿ ಅಂಶಗಳು.
ಕಳೆದ ಸಾಲಿನ ಲಾಭ 12.14 ಕೋಟಿಯನ್ನು ಹಿಂದಿಕ್ಕಿದ ಬ್ಯಾಂಕ್ ತನ್ನ ಲಾಭವನ್ನು : 16.31 ಕೋಟಿ ವೃದ್ಧಿಸಿಕೊಂಡಿದ್ದು, ತೆರಿಗೆ ಹಾಗೂ ಇತರೆ ಪ್ರಾವಧಾನಗಳ ನಂತರ ನಿವ್ವಳ ಲಾಭ 841 ಕೋಟಿಗಳಿಸಿದೆ ಎಂದರು. 58 ಕೋಟಿ ಸ್ವಂತ ಬಂಡವಾಳ, 704 ಕೋಟಿ ಠೇವಣಿ ಸಂಗ್ರಹಿಸಿ ಮುನ್ನಡೆದು 459 ಕೋಟಿ ಸಾಲ ವಿತರಿಸಿ ಒಟ್ಟು 162 ಕೋಟಿ ವ್ಯವಹಾರವನ್ನು ಮಾಡಿದೆ ಎಂದರು.ಬ್ಯಾಂಕ್ ಪ್ರಗತಿಯ ಮಾನದಂಡವಾದ ಅನುತ್ಪಾದಕ ಆಸ್ತಿ ನಿವ್ವಳ 0%ವಾಗಿದ್ದು ಬ್ಯಾಂಕ್ ಸದೃಡತೆಗೆ ಸಾಕ್ಷಿಯಾಗಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕರಾದ ಛಾಯಾದಿವಾಕರ, ರಮೇಶ ಪುರೋಹಿತ, ಎಂ.ವೆಂಕಪ್ಪ, ಗಂಗಾಧರ ಪತ್ತಾರ ಮಾಜಿ ನಿರ್ದೇಶಕ ಕೆ.ಬಸವರಾಜ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಪಾಲ್ಗೊಂಡಿದ್ದರು.