ವಿಕಾಸ ಬ್ಯಾಂಕ್‍ನಲ್ಲಿ ಪತ್ರಕರ್ತೆ ರೇಖಾ ಪ್ರಕಾಶರವರಿಗೆ ಸನ್ಮಾನ ಸನ್ಮಾನ, ಗೌರವಗಳು ಹೊಣೆಗಾರಿಕೆಯನ್ನು ವೃದ್ಧಿಸುತ್ತವೆ- ರೇಖಾ ಪ್ರಕಾಶ

ಸಂಜೆವಾಣಿ ವಾರ್ತೆ
ಹೊಸಪೇಟೆ ಅ16: ನಮಗೆ ದೊರೆಯುವ ಸನ್ಮಾನ, ಗೌರವಗಳು ನಮ್ಮ ಹೊಣೆಗಾರಿಕೆಯನ್ನು ವೃದ್ಧಿಸುತ್ತವೆ ಎಂದು ಹಿರಿಯ ಪತ್ರಕರ್ತೆ ರೇಖಾ ಪ್ರಕಾಶ ಹೇಳಿದರು.
ಶುಕ್ರವಾರ ಸಂಜೆ ಹೊಸಪೇಟೆಯ ವಿಕಾಸ ಬ್ಯಾಂಕ್‍ನಲ್ಲಿ “ವಿಜಯನದಶಮಿ ಗೌರವ” ಸಮರ್ಪಣೆ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು ಸಮಾಜದಲ್ಲಿ ಬೆಳೆದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂಬುದು ಒಂದಡೆಯಾದರೆ ನಮ್ಮ ಕಾರ್ಯವನ್ನು ಗುರುತಿಸಿ ನೀಡುವ ಗೌರವಗಳು ನಮ್ಮನ್ನು ಮತ್ತಷ್ಟು ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ ಹಿರಿಯರೊಂದಿಗೆ ವೇದಿಕೆಯನ್ನು ಹಂಚಿಕೊಂಡು ಪಡೆಯುವ ಸನ್ಮಾನಗಳಂತು ಜಾಗರೂಕತೆಯಿಂದ ಕಾರ್ಯನಿರ್ವಹಿಸಲು ಪ್ರೇರಣೆಯಾಗಲಿವೆ ಎಂದರು.
ಇತ್ತೀಜೆಗೆ ಕಿಡ್ಡಿ ಶೇಷಣ್ಣ ದತ್ತಿನಿಧಿ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮೂರು ಹೊಸಪೇಟೆ ಟೈಮ್ಸ್ ಪತ್ರಿಕೆಯ ಸಂಪಾದಕಿಯಾದ ರೇಖಾ ಪ್ರಕಾಶ ರವರಿಗೆ ಸನ್ಮಾನ ನೀಡಿದ ಮಾತನಾಡಿದ ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಮಾತನಾಡಿ ವಿಕಾಸ ಬ್ಯಾಂಕ್ ಒಂದು ಸಾರ್ವಜನಿಕ ಆರ್ಥಿಕ ಸಂಸ್ಥೆಯಾಗಿದ್ದು ಈ ವರೆಗಿನ ನಮ್ಮ ಬೆಳವಣಿಯಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಗುರುತಿಸಿ ಸನ್ಮಾನ ನೀಡಿಬೇಕು ಎಂದು ಆಡಳಿತ ಮಂಡಳಿ ತಿರ್ಮಾನಿಸಿದೆ ಇಂತಹ ಸಂದರ್ಭದಲ್ಲಿ ಇವರಿಗೆ ಪ್ರಶಸ್ತಿ ಬಂದಿರುವುದು ಸಂತೋಷದ ವಿಚಾರವಾಗಿದ್ದು ನವರಾತ್ರಿಯ ಈ ಸಂದರ್ಭದಲ್ಲಿ ಗೌರವ ನೀಡಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಪತ್ರಕರ್ತ ಅನಂತ ಜೋಶಿ ಮಾತನಾಡಿದರು  ಸಮಾರಂಭದಲ್ಲಿ ನಿರ್ದೇಶಕರಾದ ರಮೇಶ ಪುರೋಹಿತ್, ಎಂ.ವೆಂಕಪ್ಪ, ಡಾ.ಮೆಹಬೂಬೀ,  ಬ್ಯಾಂಕ್ ಸಲಹೆಗಾರರಾದ ಚಂದಾಹುಸೇನ್ ಡಾ.ಸಲೀಂ ವಿಭಾಗೀಯ ವ್ಯವಸ್ಥಾಪಕಿ ಮಧುಶ್ರೀ, ಗವಿಸಿದ್ಧಪ್ಪ,  ಅಶ್ವಿನಿ ದೇಸಾಯಿ, ಗುರುಸಿದ್ಧಯ್ಯ ಹಿರೇಮಠ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.