ವಿಕಾಸ ಬ್ಯಾಂಕ್‍ಗೆ 12.84 ಕೋಟಿ ಲಾಭ. ವರ್ಷಾಂತ್ಯಕ್ಕೆ 937.55 ಕೋಟಿ ವ್ಯವಹಾರದ ಪ್ರಗತಿ

ಹೊಸಪೇಟೆ, ಏ.2: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ 2020/21ನೇ ಆರ್ಥಿಕ ವರ್ಷದಲ್ಲಿ 12.84 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಗ್ರಾಹಕರು, ಸದಸ್ಯರು ಹಾಗೂ ಎಲ್ಲ ವಲಯಗಳ ನೀಡಿದ ಸಹಕಾರ ಬ್ಯಾಂಕು ಕಳೆದ ಆರ್ಥಿಕ ವರ್ಷದಲ್ಲಿ ಸಾಧಿಸಿದ ಪ್ರಗತಿಯ ಪಕ್ಷಿನೋಟವ ಕುರಿತು ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 12.84 ಕೋಟಿ ಒಟ್ಟು ಲಾಭಗಳಿಸಿದ್ದ ತೆರಿಗೆಯ ನಂತರ 4.22 ಕೋಟಿ ನಿವ್ವಳ ಲಾಭಗಳಿಸಿದಂತಾಗಿದೆ ಎಂದು ಬ್ಯಾಂಕ್‍ಗಳು ಆರ್ಥಿಕ ಸುಭ್ರತೆಯ ಮಾನದಂಡವಾದ(ಎನ್‍ಪಿಎ) 4.38 ಆಗಿದ್ದು, ನಿವ್ವಳ ಅನುತ್ಪಾದಕ ಆಸ್ತಿಯ ಪ್ರಮಾಣ 2.36 ಪ್ರತಿಶತ ಹೊಂದಿದೆ ಈ ವರ್ಷ 577.44 ಕೋಟಿ ಠೇವಣಿ ಹಾಗೂ 360.11 ಕೋಟಿ ಸಾಲ ಹಂಚಿಕೆ ಮಾಡಿದ್ದು ಒಟ್ಟು 937.55 ಕೋಟಿ ವ್ಯವಹಾರವನ್ನು ಮಾಡಿದೆ ಎಂದರು.
ಕೋವಿಡ್‍ನ ಈ ಸಂದರ್ಭದಲ್ಲಿ ಗ್ರಾಹಕರ, ಸದಸ್ಯರ ಸಹಕಾರ ಈ ಪ್ರಗತಿಗೆ ಕಾರಣವಾಗಿದೆ ಎಂದ ಅವರು ಆಬಿಐನ ನಿಯಮಾವಳಿಯಂತೆ ಸಹಕಾರಿ ಬ್ಯಾಂಕ್ ಆಗಿ ವೃತ್ತಪರತೆಯೊಂದಿಗೆ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಮುಂಬರುವ ಆಗಷ್ಟ 21 ರಿಂದ ಬ್ಯಾಂಕ್‍ನ ಬೆಳ್ಳಿಹಬ್ಬದ ಆಚರಣೆ ಆರಂಭವಾಗಲಿದ್ದು ಅರ್ಥಪೂರ್ಣವಾಗಿ ಆಚರಿಸಲು ಯೋಚಿಸಲಾಗಿದೆ ಎಂದರು. ಕಾಗದ ರಹಿತ ಬ್ಯಾಂಕ್‍ಂಗ್ ಸೇವೆ ಆರಂಭಸಲು ಮುಂದಾಗಲಿದ್ದೇವೆ ಎಂದರು. ಈವೆಗೂ ಕೋವಿಡ್‍ನ ಸಂದಭ ್ದಲ್ಲಿ 94 ಗ್ರಾಹಕರಿಂದ 45 ಲಕ್ಷ ವಿಮಾ ಪರಿಹಾರವನ್ನು ಒದಗಿಸಲು ಬ್ಯಾಂಕ್ ಶ್ರಮವಹಿಸಿದೆ ಎಂದರು.
ಬ್ಯಾಂಕ್‍ಂಗ್ ಹೊರತಾಗಿ ನಡೆಯುವ ಹಣಕಾಸು ವ್ಯವಹಾರವನ್ನು ತನ್ನತ್ತ ಸೆಳೆಯುವ ಮಹಾದಾಸೆ ಹೊಂದಿರುವ ಬ್ಯಾಂಕ್ ಈ ಹಂತದ ಯಶಸ್ವಿಗೆ ಸಹಕಾರಿಯಾಗಿದೆ. ಮತ್ತಷ್ಟು ಈ ವಲಯವನ್ನು ಬ್ಯಾಂಕ್‍ನತ್ತ ಸೆಳೆಯಲು ಪ್ರಯತ್ನಿಸುವುದಾಗಿ ತಿಳಿಸಿದರು. ಆಗಷ್ಟು 21 ರಿಂದ ಆರಂಭವಾಗುವ ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ ವೃದ್ಧಾಶ್ರಮ ಹಾಗೂ ಸ್ವಂತ ಕಟ್ಟಡವನ್ನು ಹೊಂದಲು ತೀರ್ಮಾನಿಸಿದೆ ಮತ್ತು ವರ್ಷ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸುವುದಾಗಿ ವಿವರಿಸಿದರು.
ಗೋಷ್ಠಿಯಲ್ಲಿ ನಿರ್ದೇಶಕರಾದ ಛಾಯಾದಿವಾಕರ್, ರಮೇಶ್ ಪುರೋಹಿತ್, ಎಂ.ವೆಂಕಪ್ಪ, ದೊಡ್ಡಬೋರಯ್ಯ , ಮಾಜಿ ನಿರ್ದೇಶಕರಾದ ಅನಂತ ಜೋಶಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹಿರೇಮಠ, ಗುರುಸಿದ್ದಯ್ಯ ಹಿರೇಮಠ ಪಾಲ್ಗೊಂಡಿದ್ದರು.