ವಿಕಾಸ ಬೆಳಗು ಸಂಗೀತ ಸಂಜೆ

ಬೀದರ್:ಆ.5: ವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಹಾಗೂ ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ತ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಬುಧವಾರ ಸಂಜೆ ಬೆಳಗು ಸಾಂಸ್ಕøತಿಕ ಹಾಗೂ ಸಾಮಾಜಿಕ ಟ್ರಸ್ಟ್ ತಂಡದಿಂದ ಜರುಗಿದ ವಿಕಾಸ ಬೆಳಗು ಸಂಗೀತ ಸಂಜೆ ಕಾರ್ಯಕ್ರಮ ಜನಮನ ಸೂರೆಗೊಂಡಿತು.

ಹಲವು ಗಾಯಕರು ಕನ್ನಡ, ಹಿಂದಿ ಚಲನಚಿತ್ರ ಗೀತೆಗಳು ಹಾಗೂ ಜಾನಪದಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಗಾಯಕಿ ಮಹೇಶ್ವರಿ ಪಾಂಚಾಳ ಗಣನಾಯಕ ಗೀತೆಯೊಂದಿಗೆ ಸಂಗೀತ ಸಂಜೆಗೆ ಚಾಲನೆ ನೀಡಲಾಯಿತು. ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ ಅಭಿನಯದ ರಾರಾ ರಕ್ಕಮ್ಮ ಗೀತೆಯನ್ನು ವೀರ ಸಮರ್ಥ ಮತ್ತು ಮಹೇಶ್ವರಿ ಅವರ ಹಾಡಿಗೆ ರಂಗಮಂದಿರದಲ್ಲಿನ ಕಲಾಸಕ್ತರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಗುರುದೇವ (ಬೊಂಬೆ ಹಾಡತೈತಿ), ಪ್ರಿಯಾಂಕಾ ಗುರುದೇವ (ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ…) ಡಾ.ವಿ.ವಿ ನಾಗರಾಜ (ಏಕ್ ಪ್ಯಾರಕಾ ನಗ್ಮಾ), ಜಗನ್ನಾಥ (ಏ ರಾತ್ ಏ ಚಾಂದಿನಿ), ನಾಗಶೆಟ್ಟಿ ಲಕೋಟೆ ಕೊಡಂಬಲ್ (ಜಾನಪದ), ಆಬೀದ್ ಅಲಿಖಾನ್, ಮಲ್ಲಿಕಾರ್ಜುನ ಶೀಲವಂತ, ಶಮೀರ್, ರವಿ ಮೂಲಗೆ, ಜ್ಞಾನರಾಜ ಹಲವು ಗೀತೆಗಳನ್ನು ಹಾಡಿ ಜನಮನ ರಂಜಿಸಿದರು.

ಉದ್ಘಾಟನೆ: ಹಿರಿಯ ಪತ್ರಕರ್ತ ಸದಾನಂದ ಜೋಶಿ ಉದ್ಘಾಟಿಸಿ ಮಾತನಾಡಿ, ಸಂಗೀತ ದೇವರ ಕೊಡುಗೆಯಾಗಿದೆ. ಸಂಗೀತ ಆರಾಧನೆಯತ್ತ ಹೆಚ್ಚು ಗಮನ ಹರಿಸಬೇಕು. ರಾಗವನ್ನು ಆಲಿಸಿ ರೋಗದಿಂದ ಮುಕ್ತಿ ಹೊಂದಬಹುದು ಎಂದು ಹೇಳಿದರು. ಗಡಿ ಜಿಲ್ಲೆಯಲ್ಲಿ ಕಲಾವಿದರ ಕೊರತೆ ಇಲ್ಲ. ಆದರೆ ಅವರನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕಾಗಿದೆ. ಇಲ್ಲಿನ ಸಂಗೀತ ಕಲಾವಿದರಿಗೆ ಸೂಕ್ತ ವೇದಿಕೆ ಸಿಕ್ಕರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತಾರೆ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ವೀರ ಸಮರ್ಥ, ಶಿವಕುಮಾರ ಶೆಟಕಾರ ಮಾತನಾಡಿದರು. ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ರಮೇಶ ಪುರೋಹಿತ, ವೆಂಕಪ್ಪ ಎಂ.ಮಲ್ಲಿಕಾರ್ಜುನ, ಗಂಗಾಧರ ಪತ್ತಾರ, ಪ್ರಸನ್ನ ಹಿರೇಮಠ ಹಾಗೂ ಬೆಳಗು ಸಂಸ್ಥೆ ಅಧ್ಯಕ್ಷ ಅನೀಲಕುಮಾರ ದೇಶಮುಖ, ಉಪಾಧ್ಯಕ್ಷೆ ಮಂಜೂಳಾ ಮೂಲಗೆ, ಸದಸ್ಯರಾದ ಡಾ. ಡಿ.ಎ ಪಾಟೀಲ್, ತ್ರಿವೇಣಿ ಕಾರ್ನಾಡ್, ಶಿಖರೇಶ್ವರ ಪಾಟೀಲ್ ಇತರರಿದ್ದರು.