ವಿಕಾಸ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

ವಿಜಯಪುರ, ಎ.6-ಶ್ರೀ ಯಲಗೂರೇಶ್ವರ ವ್ಹಿ.ವ್ಹಿ.ಸಂಘ ವಿಜಯಪುರ ಹಾಗೂ ವಿಕಾಸ ಪ್ರೌಢಶಾಲೆ ಮತ್ತು ಎಸ್ ವೈ ಪದವಿಪೂರ್ವ ಮಹಾವಿದ್ಯಾಲಯ 2019-20 ನೇ ಸಾಲಿನ ದ್ವಿತಿಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ನಗರದ ಜೈ ಕರ್ನಾಟಕ ಕಾಲನಿಯಲ್ಲಿರುವ ವಿಕಾಸ ಪ್ರೌಢಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಯಲಗೂರೇಶ್ವರ ವ್ಹಿ.ವ್ಹಿ.ಸಂಘ ಸಂಘದ ಅಧ್ಯಕ್ಷರಾದ ಎಚ್.ಜಿ. ತೊನಶ್ಯಾಳ ಅವರು ನೆರವೇರಿಸಿ ಮಾತನಾಡುತ್ತ, ಸಾಧನೆಯ ಹಾದಿ ಸುಗಮವಲ್ಲ ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ, ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಯಶಸ್ವಿ ಸಿಗಬಲ್ಲದು ಎಂದು ಮಾತನಾಡಿದರು.
ಪ್ರಾಸ್ತಾವಿಕವಾಗಿ ಶಿಕ್ಷಕರಾದ ಶಿವಾನಂದ ಹಿರೇಕುರುಬರ ಮಾತನಾಡಿ, ಹಣಗಳಿಕೆಯೊಂದೆ ಜೀವಮಾನದ ಗುರಿಯಾಗಬಾರದು. ನಿಮ್ಮನ್ನು ಹೆತ್ತವರು ನಿಮಗೆ ಶಿಕ್ಷಣ ಸಂಸ್ಥೆಗೆ ಅಮೂಲ್ಯ ರತ್ನಗಳಾಗಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆ ನಿರೀಕ್ಷೆ ಹುಸಿಯಾಗದಿರಲಿ ತಾವುಗಳು ಆ ಮಟ್ಟಕ್ಕೆ ಬೆಳೆದಾಗ ಮಾತ್ರ ಸಂಸ್ಥೆಯ ಪರಿಶ್ರಮ ಸಾರ್ಥಕವಾಗುತ್ತದೆ ಎಂದು ಹಿತ ನುಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ ಎಂ.ಆರ್. ಹೋಳಿ, ಹಾಗೂ ಶ್ರೀಮತಿ ಎಸ್.ಬಿ. ಪಾಟೀಲ್ ಹಾಗೂ ವಿ.ಜಿ. ವಪ್ಪಾರೆ, ಹಾಗೂ ವಿ.ಎಸ್. ಸಜ್ಜನರ ಹಾಗೂ ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಯಕ್ರಮವನ್ನು ಶ್ರೀಮತಿ ದೀಪಿಕಾ ಕರಿಗಾರ ನಿರೂಪಿಸಿದರು. ಶ್ರೀಮತಿ ಕವಿತಾ ದೊಡಮನಿ ಹಾಗೂ ಎಸ್.ಬಿ. ಚೌಧರಿ ವಂದಿಸಿದರು.