ವಿಕಾಸಕ್ಕೆ ವಿವೇಕಾನಂದರ ವಿಚಾರ ಪಾಲಿಸಿ: ಸಿದ್ದವೀರಯ್ಯಾ

ವಾಡಿ:ಜ.13: ವ್ಯಕ್ತಿವ ವಿಕಾಸನಕ್ಕೆ ವಿವೇಕಾನಂದರನ್ನು ಆರಾಧಿಸುವುದರ ಜೋತೆಗೆ ಅವರ ವಿಚಾರಗಳನ್ನು ತಿಳಿದು ನಡೆಯುವ ಕೆಲಸ ಆಗಬೇಕಾಗಿದೆ. ಇಂದು ಶಿಕ್ಷಣ ನೀಡುವ ಸಂಸ್ಥೆಗಳಿಗಿಂತ ಉತ್ತಮ ಸಂಸ್ಕಾರ ನೀಡುವ ಶಿಕ್ಷಣ ಸಂಸ್ಥೆಗಳ ಅಗತ್ಯ ತುಂಬಾ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿದ್ಧವೀರಯ್ಯ ರುದ್ನೂರ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯ 40 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ಶಿಕ್ಷಣದಿಂದ ಮಗುವಿನ ಸರ್ವಾಂಗೀಣ ವಿಕಾಸವಾಗಬೇಕು ಆದರೆ ದುರಂತವೆಂದರೆ ಬಹುತೇಕ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ಕೆ ಜೋತು ಬಿದ್ದು ಬೌದ್ಧಿಕ ಬೆಳವಣಿಗೆಗೆ ಮಾತ್ರ ಆದ್ಯತೆ ನೀಡುತ್ತಿವೆ. ರಾವೂರ ಗ್ರಾಮದ ಈ ಸಂಸ್ಥೆ ತನ್ನ ಹತ್ತಾರು ವಿಭಿನ್ನ ಸಾಹಿತ್ಯಿಕ, ಸಾಂಸ್ಕøತಿಕ,ಶೈಕ್ಷಣಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಮನೆಮಾತಾಗಿದೆ ಮತ್ತು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

 ಮುಖ್ಯತಿಥಿಯಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ ಸಮಾಜದಲ್ಲಿ ಇಂದು ನೈತಿಕ ಮೌಲ್ಯಗಳ ಅಧಃಪತನವಾಗುತ್ತಿರುವುದಕ್ಕೆ ಕುಸುಯುತ್ತಿರುವ ಶಿಕ್ಷಣದ ಗುಣಮಟ್ಟವೇ ಕಾರಣವಾಗಿದೆ. ವಿಧ್ಯಾವಂತರ,ಶ್ರೀಮಂತರಿಗಿಂತ ಇಂದು ಹೃದಯವಂತರ ಅಗತ್ಯ ತುಂಬಾ ಇದೆ. ಸುಶಿಕ್ಷಿತರೇ ಇಂದು ತಮ್ಮ ತಂದೆ ತಾಯಿಗಳನ್ನು ವೃದ್ದಾಶ್ರಮಗಳಿಗೆ ಬಿಡುತ್ತಿರುವುದು ದುರದುಷ್ಟಕರ. ಶಿಕ್ಷಣದ ಜೋತೆಗೆ ಸಂಸ್ಕಾರ ನೀಡಿದ್ದೇ ಆದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಕಾಲ ಕೆಟ್ಟಿದೆ ಎಂದು ಹೇಳುತ್ತಾರೆ. ಆದರೆ ಕಾಲ ಕೆಟ್ಟಿಲ್ಲ ಮನುಷ್ಯರ ಮನಸ್ಸುಗಳು ಕೆಟ್ಟಿವೆ ಆದರೆ ಕಾಲ ಅಷ್ಟೇ ಇದೆ ಎಂದು ಮಾರ್ಮಿಕವಾಗಿ ನುಡಿದರು.
ವೇದಿಕೆಯ ಮೇಲೆ ಸಂಸ್ಥೆಯ ಉತ್ತರಾಧಿಕಾರಿ ಸಿದ್ಧಲಿಂಗ ದೇವರು ದಿವ್ಯಸಾನಿಧ್ಯ ವಹಿಸಿಕೊಂಡಿದ್ದರು. ನೇತೃತ್ವವನ್ನು ಓಂ ಗುರೂಜಿ ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಚನ್ನಣ್ಣ ಬಾಳಿ ವಹಿಸಿದ್ದರು. ಮುಖ್ಯತಿಥಿಗಳಾಗಿ ಬಿಆರ್ ಸಿ ಮಲ್ಲಿಕಾರ್ಜುನ ಸೇಡಂ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ. ಜನಸ್ನೇಹಿ ಪೋಲಿಸ ಪೇದೆ ದತ್ತು ಜಾನೆ ವೇದಿಕೆಯ ಮೇಲಿದ್ದರು.

ಸಮಾರಂಭದಲ್ಲಿ ಪ್ರಮುಖರಾದ ಡಾ.ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೇದ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ, ಮೋಹನ ಸೂರೆ, ಅಣ್ಣಾರಾವ ಬಾಳಿ, ಈಶ್ವರ ಬಾಳಿ, ಈಶ್ವರ ದೊಡ್ಡಮನಿ, ಸಿದ್ಧಲಿಂಗ ಜ್ಯೋತಿ, ರವೀಂದ್ರ ನಡುವೀನಕೇರಿ, ಶರಣು ಜ್ಯೋತಿ, ಚಂದ್ರಶೇಖರ ಹಾವೇರಿ ಮಹೇಶ ಬಾಳಿ, ಸಿದ್ದಾರೂಡ ಬಿರಾದಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ ಸುಗುಣಾ ಕೋಳ್ಕೂರ ನಿರೂಪಿಸಿದರು. ಪ್ರಾಚಾರ್ಯರಾದ ಕೆ.ಐ.ಬಡಿಗೇರ ಸ್ವಾಗತಿಸಿದರು. ಸಿದ್ಧಲಿಂಗ ಬಾಳಿ ವಾರ್ಷಿಕ ವರದಿ ವಾಚನ ಮಾಡಿದರು ಭುವನೇಶ್ವರಿ.ಎಂ ಹಿನ್ನಲೆ ವಾಚನ ಮಾಡಿದರು.

ಸುತ್ತಲೂ ಆಂಗ್ಲಮಾಧ್ಯಮ ಶಾಲೆಗಳ ಸ್ಪರ್ಧೆಗಳ ನಡೆವೆಯೂ ರಾವೂರನ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆ ಅತ್ಯಂತ ಯಶಸ್ವಿಯಾಗಿ 40 ವರ್ಷ ಪೂರೈಸಿರುವುದು ಅದ್ಭುತ ಸಾಧನೆಯೇ ಸರಿ, ಉತ್ತಮ ಗುಣಮಟ್ಟದ ಶಿಕ್ಷಣ ಕೊಟ್ಟರೆ ಪಾಲಕರೂ ಹುಡುಕಿಕೊಂಡು ಬರುತ್ತಾರೆ ಎನ್ನಲು ಈ ಶಿಕ್ಷಣ ಸಂಸ್ಥೆ ಮಾದರಿ. ಕನ್ನಡ ಮಾಧ್ಯಮ ಶಾಲೆಗಳೇ ಮರೆಯಾಗುತ್ತಿರುವ ಈ ದಿನಗಳಲ್ಲಿ ಇಷ್ಟು ಗಟ್ಟಿಯಾಗಿ ಸಂಸ್ಥೆ ಬೆಳೆಯುತ್ತಿರುವುದು ಸಂತೋಷದ ವಿಷಯ.

ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿ ಮಠ, ಹಾವೇರಿ