ವಿಕಾರಿಗಳನ್ನು ಸ್ವರೂಪಿಗಳಾಗಿ ಮಾಡುವುದೇ ಹಡಪದ ಜನಾಂಗ : ಮಹಾಂತ ಶ್ರೀ


(ಸಂಜೆವಾಣಿ ವಾರ್ತೆ)
ಕೊಟ್ಟೂರು, ಜು.20: ಮುಖ ತಲೆಯ ಮೇಲೆಬೆಳೆಯುವ ಕೂದಲುಗಳಿಂದ ವಿಕಾರಗೊಳ್ಳುವ ವ್ಯಕ್ತಿಗಳಿಗೆ ಕ್ಷೌರ ಮಾಡುವ ಮೂಲಕ ಸ್ವರೂಪಿಗಳನ್ನಾಗಿ ಮಾಡುವ ಕಾಯಕದ ಹಡಪದ ಜನಾಂಗದ ಕಾರ್ಯ ಸಮಾಜದಲ್ಲಿ ಹೆಮ್ಮೆ ತರುವುದಾಗಿದೆ ಎಂದು ಹಡಪದ ಸಮಾಜದ ಶ್ರೀಗಳಾದ ಮಹಾಂತ ಬಸವಲಿಂಗ ಸ್ವಾಮಿಗಳು ಹೇಳಿದರು.
ಅವರು ನಿನ್ನೆ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಸ್ಥಳಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ 888ನೆಯ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಆಕಾಶ ಕಾಯವನ್ನು ಅಧ್ಯಯನ ಮಾಡಿದ ಮೊದಲ ಮಹಿಳೆ ಹಡಪದ ಲಿಂಗಮ್ಮ ಎಂಬುದು ನಾವು ಮರೆಯಬಾರದು ನಮ್ಮ ದೇಶದಲ್ಲಿ 140 ಕೋಟಿ ಜನಾಂಗದಲ್ಲಿ 13 ಕೋಟಿ ಜನಾಂಗ ಹಡಪದ ಜನಾಂಗ ಇದೆ. ಬಸವಣ್ಣನವರು ಹಡಪದ ಅಪ್ಪಣ್ಣನಿಗೆ ಲಿಂಗ, ವಿಭೂತಿ, ರುದ್ರಾಕ್ಷಿ ನೀಡಿ ದೇವಸ್ಥಾನಕ್ಕೆ ಬರಮಾಡಿಕೊಂಡರು ಹಾಗಾಗಿ ಹಡಪದ ಜನಾಂಗದವರು ಮನೆಯಲ್ಲಿ ಲಿಂಗ, ವಿಭೂತಿ, ರುದ್ರಾಕ್ಷಿ ವಚನಗಳು ಎಲ್ಲಾ ಮನೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.
ಇಲ್ಲಿನ ಡೋಣೂರು ಚಾನುಕೋಟಿ ಮಠದ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಯು ಮರಿ ಕೊಟ್ಟೂರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಬನಶಂಕರಿ ದೇವಸ್ಥಾನ ವರೆಗೆ ಮೆರವಣಿಗೆ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಶೇಖರಪ್ಪ, ಮಾಹಂತೇಶ ಮಂಜುನಾಥ್, ಚಂದ್ರಪ್ಪ, ಮಲ್ಲಮ್ಮ ಹಾಗೂ ಇತರರು ಉಪಸ್ಥಿತರಿದ್ದರು.