ವಿಕಾರಾಬಾದ್-ಪರಳಿ ಜೋಡಿ ಮಾರ್ಗಕ್ಕೆ ಮಂಜೂರಾತಿ

ಬೀದರ್;ಆ.8: ವಿಕಾರಾಬಾದ್-ಬೀದರ್-ಪರಳಿ ಜೋಡಿ ರೈಲು ಮಾರ್ಗಕ್ಕೆ ರೈಲ್ವೆ ಇಲಾಖೆಯಿಂದ ಮಂಜೂರಾತಿ ದೊರೆತಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ವಿಕಾರಾಬಾದ್-ಬೀದರ್-ಪರಳಿ 267.77 ಕಿ.ಮೀ ಜೋಡಿ ರೈಲು ಮಾರ್ಗದ ಅಂತಿಮ ಲೋಕೇಷನ್ ಸರ್ವೇಗೆ ರೈಲ್ವೆಯ ಮಂಜೂರಾತಿ ಸಿಕ್ಕಿದೆ. ಸರ್ವೇ ಕಾರ್ಯಕ್ಕೆ ?5.36 ಕೊಟಿ ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು, ಕೆಲಸಕ್ಕೆ ಚಾಲನೆ ನೀಡಲಾಗುವುದು. ಜೋಡಿ ರೈಲು ಮಾರ್ಗದಿಂದ ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ರೈಲುಗಳು ತೆಲಂಗಾಣದ ವಿಕಾರಾಬಾದ್ ನಿಲ್ದಾಣದಲ್ಲಿ ತಡಹೊತ್ತು ನಿಲ್ಲುವುದು ತಪ್ಪುತ್ತದೆ. ಸಕಾಲಕ್ಕೆ ಎಲ್ಲಾ ರೈಲುಗಳು ಸಂಚರಿಸುತ್ತವೆ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ್ -ಕಲಬುರಗಿ ಎರಡು ಡೆಮು ರೈಲುಗಳ ಸಮಯ ಸಹ ಬದಲಿಸಲಾಗಿದೆ. ರೈಲು ಗಾಡಿ ಸಂಖ್ಯೆ 07761 ಬೀದರ್‍ನಿಂದ ಕಲಬುರಗಿಗೆ ಬೆಳಿಗ್ಗೆ 7.30ರ ಬದಲು 6.45ಕ್ಕೆ ಹೊರಟು 9.30ಕ್ಕೆ ಕಲಬುರಗಿ ತಲುಪಲಿದೆ. ಗಾಡಿ ಸಂಖ್ಯೆ 07748 ಸಂಜೆ 4.40ರ ಬದಲು 5.30ಕ್ಕೆ ಬೀದರ್‍ನಿಂದ ಹೊರಟು ರಾತ್ರಿ 8.20ಕ್ಕೆ ಕಲಬುರಗಿ ಸೇರಲಿದೆ. ಗಾಡಿ ಸಂಖ್ಯೆ 07745 ಬೆಳಿಗ್ಗೆ 7.30ರ ಬದಲು 6.45ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 9.30ಕ್ಕೆ ಬೀದರ್ ಸೇರುತ್ತದೆ. ರೈಲು ಸಂಖ್ಯೆ 07764 ಸಂಜೆ 4.40ರ ಬದಲಾಗಿ ಸಂಜೆ 5.30ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 8.05ಕ್ಕೆ ಬೀದರ್ ಸೇರಲಿದೆ ಎಂದು ಮಾಹಿತಿ ನೀಡಿದ್ದಾರೆ.