ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿ: ಸಚಿವ ಖೂಬಾ ಕಾರ್ಯಕ್ಕೆ ಅಮಿತ ಷಾರಿಂದ ಮೆಚ್ಚುಗೆ

ಬೀದರ:ಫೆ.8: ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮೀತ ಶಾರವರಿಗೆ, ಕೇಂದ್ರ ಸಚಿವರು ಹಾಗೂ ಬೀದರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಭಗವಂತ ಖೂಬಾರವರು ದೇಹಲಿಯಲ್ಲಿ ಭೇಟಿಯಾಗಿ “ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಯಶೋಗಾಥೆ” ಕುರಿತು ಸಿದ್ದಪಡಿಸಿರುವ ಮಾಹಿತಿ ಪುಸ್ತಕವನ್ನು ನೀಡಿ, ಹಲವಾರು ವಿಷಯಗಳ ಕುರಿತು ಚರ್ಚಿಸಿದರು.

ಅಮೀತ ಷಾರವರು, ಸದರಿ ಪುಸ್ತಕವನ್ನು ಸಂಪೂರ್ಣವಾಗಿ ಓದಿ, ಪ್ರಧಾನಿಗಳು ಕೊಟ್ಟ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಬಗ್ಗೆ, ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರಿಂದ ಪ್ರಶಂಶನಿಯ ಮಾತುಗಳು ತಮ್ಮ ಬಗ್ಗೆ ಕೇಳಿ ಬಂದಿವೆ ಹಾಗೂ ವರದಿಗಳು ಬಂದಿವೆ, ಮೋದಿಯವರ ನಿರ್ದೇಶನದಂತೆ ಯಶಸ್ವಿಯಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದಿರಿ ತಮಗೆ ಅಭಿನಂದನೆಗಳು ತಿಳಿಸುತ್ತೇನೆ ಎಂದು ಮೆಚ್ವುಗೆ ವ್ಯಕ್ತಪಡಿಸಿದರು. 
ಜೊತೆಗೆ ಕಳೆದ 10 ವರ್ಷಗಳಲ್ಲಿ ಬೀದರ ಲೋಕಸಭಾ ಕ್ಷೇತ್ರದ ಸಂಸದರಾಗಿ ಹಾಗೂ 2.5 ವರ್ಷಗಳಿಂದ ಕೇಂದ್ರ ಸಚಿವರಾದ ಮೇಲೆ ಭಗವಂತ ಖೂಬಾರವರು ಮಾಡಿರುವ ಅಭಿವೃದ್ದಿ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು ಮತ್ತು ಪ್ರಸಕ್ತ ರಾಜ್ಯದ ಮತ್ತು ಬೀದರ ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಖೂಬಾರವರೊಂದಿಗೆ ಚರ್ಚಿಸಿ, ಚುನಾವಣೆಗೆ ಸಂಬಂಧಿಸಿದಂತೆ ಮಾಡಿಕೊಳ್ಳುತ್ತಿರುವ ಪೂರ್ವ ಸಿದ್ದತೆಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆದುಕೊಂಡರು. 
ಈ ಸಂದರ್ಭದಲ್ಲಿ ಮೋದಿಜಿಯವರ ಆಶಯದಂತೆ, ಚಾರ ಸೊ ಪಾರ್ ಮಾಡುವುದರಲ್ಲಿ ಬೀದರ ಲೋಕಸಭಾ ಕ್ಷೇತ್ರವು ಒಂದಾಗಿರಲಿದೆ, ಜನರು ನನ್ನ ಅಭಿವೃದ್ದಿ ಕಾರ್ಯಗಳು ಮೆಚ್ಚಿದ್ದಾರೆ ಹಾಗೆ ಪ್ರತಿನಿತ್ಯ ಕಾರ್ಯಕರ್ತರು, ಜನರು ದೂರವಾಣಿ ಮೂಲಕ ಕರೆ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ, ಈ ಸಲ ಮತ್ತೊಮ್ಮೆ ತಮಗೆ ಗೆಲ್ಲಿಸಿ ಮೂರನೆ ಬಾರಿಗೆ ಮೋದಿಯವರಿಗೆ ಪ್ರಧಾನಮಂತ್ರಿ ಮಾಡೋಣವೆಂದು ಜನ ಹೇಳುತ್ತಿರುವ ಬಗ್ಗೆ ತಿಳಿಸಿದರು, ಜನತೆ ಬರುವ ಚುನಾವಣೆಯಲ್ಲಿ ಪಾಲ್ಗೋಳ್ಳಲು ಸ್ವಯಂ ಸಿದ್ದರಾಗಿ ನಿಂತಿದ್ದಾರೆ ಎಂದು ಸಚಿವ ಖೂಬಾ, ಅಮೀತ ಷಾರವರಿಗೆ ತಿಳಿಸಿದರು.