ವಿಕಸಿತ ಭಾರತ ಸಂಕಲ್ಪ ಯಾತ್ರೆ ಭಾರತೀಯರಿಗೆಮೋದಿ ಗ್ಯಾರಂಟಿ: ಕೇಂದ್ರ ಸಚಿವ ಖೂಬಾ

ಕಲಬುರಗಿ,ಫೆ.1: ಪ್ರಧಾನಮಂತ್ರಿಯವರ ಮಹತ್ವಕಾಂಕ್ಷಿ ಕಾರ್ಯಕ್ರಮ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಭಾರತೀಯರಿಗೆ ಸುಭದ್ರತೆಯ ಗ್ಯಾರಂಟಿ ನೀಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನಗಳ ಖಾತೆಯ ರಾಜ್ಯ ಸಚಿವರಾದ ಭಗವಂತ ಖೂಬಾ ತಿಳಿಸಿದ್ದಾರೆ.
ಕಲ್ಬುರ್ಗಿ ದೂರದರ್ಶನ ಕೇಂದ್ರದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಹಾಗೂ ಮೋದಿ ಸರಕಾರದ ದಶಕದ ಸಾಧನೆಯ ಕುರಿತಾಗಿ ಜನವರಿ 27ರಂದು ಚಂದನ ವಾಹಿನಿಯಲ್ಲಿ ಪಿತ್ತರಗೊಳ್ಳಲಿರುವ ಕಾರ್ಯಕ್ರಮದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ ಈ ವಿಷಯ ತಿಳಿಸಿದರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಆರಂಭಿಸಿದ ಮುದ್ರಾ ರೈತ ಯೋಜನೆ ಸ್ವನಿಧಿ ಯೋಜನೆ ಆಯುಷ್ಮಾನ್ ಭಾರತ್ ವಿಶ್ವಕರ್ಮ ಯೋಜನೆ ಜನೌಷಧಿ ಕೇಂದ್ರ ಉಜ್ವಲ ಯೋಜನೆ, ಬಡತನ ನಿರ್ಮೂಲನ ಯೋಜನೆ ಇವುಗಳಿಂದಾಗಿ ಭಾರತ ಅಭಿವೃದ್ಧಿಯಲ್ಲಿ ವೇಗ ಪಡೆದು ವಿಶ್ವದಲ್ಲಿ ಐದನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿದೆ 2047ರಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ತಲೆಯೆತ್ತಿ ನಿಲ್ಲಲಿದೆ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಇರಲಿದೆ ಬಡವರು ಮಹಿಳೆಯರು ಗ್ರಾಮೀಣರು ಕೇಂದ್ರ ಸರ್ಕಾರದ ಯೋಜನೆಗಳಲಿ ಫಲಾನುಭವಿಗಳಾಗದೆ ಕಾರಣಾಂತರಗಳಿಂದ ಉಳಿದುಕೊಂಡಲ್ಲಿ ಅವರನ್ನು ಯೋಜನೆಗಳಲ್ಲಿ ಸೇರ್ಪಡೆಗೊಳಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನ ಮೋದಿ ಗ್ಯಾರಂಟಿಯಾಗಿ ಹಳ್ಳಿಗಳಿಗೆ ಭೇಟಿ ನೀಡುತ್ತಿದೆ ಇದರ ಲಾಭವನ್ನು ಪಡೆದುಕೊಳ್ಳುವುದು ಉತ್ತಮ ಎಂದು ಇದುವರೆಗೆ ಸುಮಾರು 15 ಕೋಟಿ ಫಲಾನುಭವಿಗಳು ತಮ್ಮ ಸುಸ್ಥಿರ ಬದುಕಿನ ಬಗ್ಗೆ ಮಾಹಿತಿಯನ್ನು ಈಗಾಗಲೇ ಹಂಚಿಕೊಂಡಿದ್ದಾರೆ ಮತ್ತು ಯಶಸ್ವಿ ಕಾರ್ಯಕ್ರಮವಾಗಿ ರೂಪುಗೊಂಡಿದೆ ಎರಡು ತಿಂಗಳ ಕಾಲದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಇನ್ನೂ ಒಂದು ತಿಂಗಳಿಗೆ ವಿಸ್ತರಿಸಲಾಗಿದ್ದು ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಲಿದರಿಂದ ಸಾಧ್ಯವಾಗುತ್ತದೆ ಎಂದರು.
ಬೀದರ ಲೋಕಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ರೈತ ಯೋಜನೆ ಜಾರಿ ಹೊಸ ರೈಲುಗಳ ಆರಂಭ ನೂತನ ಎಫ್ ಎಂ ರೇಡಿಯೋ ಕೇಂದ್ರ ಪ್ರಾರಂಭ,ಬೆಂಗಳೂರು – ಬೀದರ್ ವಿಮಾನ ಸಂಚಾರ, ವಸತಿ ಯೋಜನೆ ಆಯುಷ್ಮಾನ್ ಕಾರ್ಡ್ ವಿತರಣೆ ಪರಿಣಾಮಕಾರಿಯಾಗಿ ಜಾರಿಗೊಂಡು ಕ್ಷೇತ್ರದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಾಗಿದೆ ಎಂದರು ತಮ್ಮ ಖಾತೆಯ ಮೂಲಕ ವಿನುತನ ಯೋಜನೆಗಳನ್ನು ಆರಂಭಿಸಿ ರಾಸಾಯನಿಕ ಮತ್ತು ರಸ ಗೊಬ್ಬರ ಕ್ಷೇತ್ರದಲ್ಲಿ ಆತ್ಮ ನಿರ್ಭರ ಸಾಧಿಸಲಾಗಿದೆ. ಪರ್ಯಾಯ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ದೇಶ ಮಹತ್ತರ ಹೆಜ್ಜೆ ಹಾಕುತ್ತಿದ್ದು ಇದು ವಿಶ್ವದ ಗಮನ ಸೆಳೆದಿದೆ ಎಂದರು.
ಕೇಂದ್ರ ಸಚಿವರನ್ನು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ಸಂದರ್ಶಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ್ ಹೆಸರುಲಿ ಪ್ರಸಾರ ನಿರ್ವಾಹಕರಾದ ಸಂಗಮೇಶ್ ತಾಂತ್ರಿಕ ವಿಭಾಗದ ನರೇಶ್,ಮುನಿರಾಜು, ದಶರಥ ಜಮಾದಾರ, ಮಲ್ಲಿಕಾರ್ಜುನ, ಸಿದ್ದರಾಮ, ಅನಿವಳ,ಹನುಮಂತ ಮಡಪೆ ,ಮೊಹಮ್ಮದ್ ಖಾಸ್ ದಾರ್,ರತ್ನಾಕರ್ ಮತ್ತಿತರರಿದ್ದರು.