ವಿಕಸಿತ ಭಾರತ ಸಂಕಲ್ಪಯಾತ್ರೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜ21: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಡಾ. ಶೇಖರ್ ಸಜ್ಜನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಒಂಬತ್ತು ವರೆ ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡು ಭಾರತವನ್ನು ಒಂದು ಪ್ರಗತಿಶೀಲ ಸಂಪತ್ಭರಿತ ಸ್ವಾವಲಂಬಿ ರಾಷ್ಟ್ರವನ್ನಾಗಿಸಿ ಪ್ರಪಂಚದಲ್ಲಿಯೇ ಮೂರನೆಯ ಬಲಿಷ್ಠ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಕ್ಕ ಎಂ ಲಮಾಣ, ನಿಂಗಪ್ಪ ಪ್ಯಾಟಿ, ಸೋಮಣ್ಣ ಹವಳದ, ಪಿಡಿಒ ಸವಿತಾ ಸೋಮಣ್ಣವರ, ರೂಪ ಬೊಮ್ಮನಹಳ್ಳಿ, ಬಸನಗೌಡ ನೀಲಪ್ಪ ಕದಡಿ, ರಾಮಣ್ಣ ಅಡರಕಟ್ಟಿ, ಕಲ್ಲಪ್ಪ ಗಂಗಣ್ಣವರ ಸೇರಿದಂತೆ ಅನೇಕರು ಭಾಗವಹಿಸಿದ್ದರು.