ವಿಕಸಿತ ಭಾರತ ಯಾತ್ರೆ ವಾಹನಕ್ಕೆ ಚಾಲನೆ

ಕೆ.ಆರ್.ಪುರ,ಡಿ.೨೭- ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ಅಭಿವೃದ್ದಿ ಪಡಿಸಿ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲೇಂದೇ ಬಂದಿರುವ ಮಹಾನ್ ತಪಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗ್ಯಾರೆಂಟಿ ಹಾಗೂ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಯ ಡಿಜಿಟಲ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು, ಜಗತ್ತಿನಲ್ಲಿ ಭಾರತದ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು, ಕಟ್ಟಕಡೆಯ ವ್ಯಕ್ತಿಯವರೆಗೂ ಅಭಿವೃದ್ದಿ ಕಾರ್ಯಗಳನ್ನು ತಲುಪಿಸಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಪ್ರತಿದಿನ ಸತತ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುವ ಜಗತ್ತಿನ ಏಕೈಕ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರಮೋದಿಯವರು ನಿಲ್ಲುತ್ತಾರೆ ಎಂದರು.
ನಮ್ಮ ಸಂಕಲ್ಪ ವಿಕಸಿತ ಭಾರತದ ಯಾತ್ರೆಯು ಪ್ರತಿ ಪಂಚಾಯಿತಿಯ ಪ್ರತಿ ಹಳ್ಳಿಗಳು, ಪ್ರತಿ ವಾರ್ಡ್ ಗಳಲ್ಲಿ ಸಂಚರಿಸುತ್ತದೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಬಗ್ಗೆಯೂ ಜನರಿಗೆ ಮನದಟ್ಟು ಮಾಡುವ ಕೆಲಸವನ್ನು ಕಾರ್ಯ ಕರ್ತರು ಮಾಡಬೇಕಿದೆ, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಭಾವಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಾಸಕ ಬಿ.ಎ ಬಸವರಾಜ ಮಾತನಾಡಿ, ಹತ್ತು ವರ್ಷಗಳ ಕಾಲ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿರುವ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು, ಮತ್ತೊಂದು ಬಾರಿ ಅವರನ್ನು ಆಯ್ಕೆ ಮಾಡುವ ಮೂಲಕ ಜಗತ್ತಿನ ಭೂಪಟದಲ್ಲಿ ಭಾರತ ಬೆಳಗುವಂತೆ ಮಾಡಬೇಕಿದೆ ಎಂದರು.
ನನಗೆ ಹೆತ್ತ ತಾಯಿಯೂ ಒಂದೇ ಪಕ್ಷವೂ ಒಂದೇ, ಪಕ್ಷದ ಏಳಿಗೆಗಾಗಿ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ,ಅದರಂತೆ ಕ್ಷೇತ್ರದ ಕಾರ್ಯಕರ್ತರು ,ಮುಖಂಡರು ಪಕ್ಷದ ಬೆಳವಣಿಗೆಗೆ ಸಹಕರಿಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ,ನಗರಜಿಲ್ಲಾ ಉಪಾಧ್ಯಕ್ಷ ಮುನೇಗೌಡ, ಮಾಜಿ ಪಾಲಿಕೆ ಸದಸ್ಯರಾದ ಸಿದ್ದಲಿಂಗಯ್ಯ,ಎಸ್.ಜಿ.ನಾಗರಾಜ್,ಅಂತೋಣಿಸ್ವಾಮಿ, ಎಸ್.ಎಸ್.ಪ್ರಸಾದ್,
ಮಂಜುಳಾದೇವಿ ಶ್ರೀನಿವಾಸ್,ಮುಖಂಡರಾದ ಕಲ್ಕೆರೆ ಗಂಗಾಧರ್, ಕೃಷ್ಣಪ್ಪ,ಮಾರ್ಕೆಟ್ ರಮೇಶ್, ವಿಜಿನಾಪುರ ರಮೇಶ್ ಗೌಡ,ಚೇಳಕೆರೆ ಸಂಪತ್, ಶಮಂತ್ ಇದ್ದರು.