ವಿಕಸಿತ ಭಾರತಕ್ಕೆ ವಿದ್ಯಾರ್ಥಿಗಳು ಕೈಜೋಡಿಸಲಿ

ಬೀದರ್:ಫೆ.29: ವಿಕಸಿತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳೂ ಕೈಜೋಡಿಸಬೇಕು ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಆರ್.ಆರ್. ಬಿರಾದಾರ ಹೇಳಿದರು.
ಇಲ್ಲಿಯ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ‘ಭಾರತ@2047: ವಿಕಸಿತ ಭಾರತದ ಕಡೆಗೆ ಸಾರ್ವಜನಿಕ ನೀತಿಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2047 ರ ವೇಳೆಗೆ ಭಾರತವನ್ನು ವಿಕಸಿತ ಭಾರತವಾಗಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ ಎಂದು ತಿಳಿಸಿದರು.
ವಿಕಸಿತ ಭಾರತದ ಸಂಕಲ್ಪ ಸಾಕಾರಕ್ಕಾಗಿ ವಿದ್ಯೆ ಹಾಗೂ ಕೌಶಲ ಹೊಂದಿದ ಮಾನವ ಸಂಪನ್ಮೂಲದ ಅಗತ್ಯವಿದೆ. ಹಳ್ಳಿಗಳ ಉದ್ಧಾರ, ತಲಾ ಆದಾಯ ಹೆಚ್ಚಳ, ಬಡತನ ನಿವಾರಣೆ, ಅಗತ್ಯ ನಾಗರಿಕ ಸೌಕರ್ಯದ ಜತೆಗೆ ಸರ್ವ ಕ್ಷೇತ್ರಗಳ ಅಭಿವೃದ್ಧಿ ಆಗಬೇಕಿದೆ ಎಂದು ಹೇಳಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮಾತನಾಡಿದರು. ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಸೂರ್ಯಕಾಂತ ಐನಾಪುರೆ, ಈಶ್ವರ ರೆಡ್ಡಿ, ನಟರಾಜ ಸುತಾರ್, ರಾಮ ಜಮಾದಾರ್, ರಾಜಶೇಖರ, ಡಾ. ಪಂಡಿತ ಗಂಗಶೆಟ್ಟಿ, ಮಂಗಲಾ, ರಾಖಿ ಕಾಡಗೆ, ಅರ್ಚನಾ, ಸಪ್ನಾ, ಅಂಬಿಕಾ, ವಿಜಯಲಕ್ಷ್ಮಿ, ಆಕಾಶ ಇದ್ದರು.
ಉಪನ್ಯಾಸಕಿ ಶ್ರೀಲತಾ ನಿರೂಪಿಸಿದರು.