ವಿಕಸಿತ ಭಾರತಕ್ಕಾಗಿ ಗ್ರಾಮಚಲೋ ಅಭಿಯಾನ

ಸಂಜೆವಾಣಿ ವಾರ್ತೆ

 ದಾವಣಗೆರೆ. ಮಾ.೨೧; ಪ್ರಧಾನಿ  ನರೇಂದ್ರ ಮೋದಿ  ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಪೇಕ್ಷೆಯಂತೆ  ದಾವಣಗೆರೆ ಕ ಸಂಸದ ಜಿ ಎಂ ಸಿದ್ದೇಶ್ವರ ರವರ ಮಾರ್ಗದರ್ಶನದಲ್ಲಿ “ಗ್ರಾಮ ಚಲೋ ಅಭಿಯಾನಕ್ಕೆ” ಜಗಳೂರು ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 210 ಗೋಪಾಗೊಂಡನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.ರಾಜ್ಯದ 28 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ, 19 ಸಾವಿರ ನಗರ ಮಟ್ಟದ ಬೂತ್ ಗಳಲ್ಲಿ 42 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಿ ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ದೊಂದಿಗೆ,ಪ್ರಧಾನಿ ಮೋದಿಜೀ ಅವರ ಕನಸು 2047 ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು, ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಮನೆ ಮನೆಗಳಿಗೆ ತಲುಪಿಸಿ ಮಗದೊಮ್ಮೆ ಮೋದಿಜೀ ಅವರನ್ನು  ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪವಾಗಿದೆ.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾ ಹಾಲು ಉತ್ಪಾದಕರ ಪ್ರಕೋಷ್ಟ ಕಾರ್ಯದರ್ಶಿ ಆರ್ ಅಶೋಕ್ ರವರು ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಧರ್ಮ ನಾಯ್ಕ್ ಶಿವು ಲ್ಯಾಬ್ ನರೇಶ್ ಭೂತ್ಗೋಪಾಗೊಂಡನಹಳ್ಳಿ ಭೂತ್ ಅಧ್ಯಕ್ಷ ಭರಮೇಶ್ ರಂಗಪ್ಪ ಹೊನ್ನುರ್ಸ ಹಾಗೂ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.