ವಿಕಸಿಕ ಪ್ರಜ್ಞಾ ಸ್ಥಿತಿಯ ಪ್ರಕಟರೂಪವೇ ಕೃತಜ್ಞತೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.15: “ಆಧ್ಯಾತ್ಮಿಕ ಹಾದಿಯಲ್ಲಿ ಬಹಳ ಪರಿಶುದ್ದವಾದ ಮತ್ತು ಶುಚಿತ್ವವಿರುವ ವಿಕಸಿಕ ಪ್ರಜ್ಞಾ ಸ್ಥಿತಿಯ ಪ್ರಕಟರೂಪವೇ ಕೃತಜ್ಞತೆಂದು” ಹಿಮಾಲಯದ ಶಿವಧ್ಯಾನ ಯೋಗಿ ನಿರಂಜನ ಸ್ವಾಮಿ ಹೇಳಿದರು.
 ನಗರದ , ಏ.15: ಶ್ರೀನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಬಳಗ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ “ವಿಶ್ವಗುರು ಬಸವೇಶ್ವರ” ಜಯಂತಿ ಹಾಗೂ “ಸಾಮೂಹಿಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನ”ದಲ್ಲಿ ಮಾತನಾಡಿದರು.  ಅನಾದಿಕಾಲದಿಂದಲೂ ಶ್ರೇಷ್ಠ ವಿವೇಕವನ್ನು ಸಜೀವವಾಗಿಟ್ಟಿರುವ ನಮ್ಮ ಸದ್ಗುರುಗಳ ದೈವಾಂಶ ಸಂಪ್ರದಾಯಗಳಿಗೆ ಗುರುಪೂಜೆಯು ಒಂದು ಕೃತಜ್ಷತೆಯ ಅಭಿವ್ಯಕ್ತಿಯಾಗಿದೆಂದು ತಿಳಿಸಿದರು.
ಗುರುಬಸವ ಮಠದ ಮ.ನಿ.ಪ್ರ.ಬಸವಭೂಷಣ ಸ್ವಾಮಿ, ಬಸವ ಭವನದ ಬಸವರಾಜಪ್ಪ ಶರಣರು, ಬಸವ ಮತ್ತು ಅಕ್ಕನ ಬಳದ ಸದಸ್ಯರು ಇದ್ದರು.