ವಿಕಲ ಚೇತನರಿಗೆ ಲಸಿಕೆ‌ಹಾಕಿಸಿದ ಶಾಸಕಿ

ಹಿರಿಯೂರು.ಮೇ.೩೧; ತಾಲೂಕು ವಿಕಲ ಚೇತನರಿಗೆ ಶಾಸಕಿ  ಕೆ ಪೂರ್ಣಿಮಾ ಶ್ರೀನಿವಾಸ್  ಕೋವಿಡ್ ಲಸಿಕೆ ಹಾಕಿಸಿದರು. ವಿಕಲಚೇತನರು ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳಲು ಕಷ್ಟವಾಗುವುದನ್ನು ಅರಿತ ಶಾಸಕರು ತಾಲ್ಲೂಕು ವಿಕಲಚೇತನರ ಸಂಘದವರನ್ನು ಆಹ್ವಾನಿಸಿ ತಾವೇ ಮುಂದೆ ನಿಂತು ಲಸಿಕೆ ಹಾಕಿಸಿದರು. ಈ ಸಂದರ್ಭದಲ್ಲಿ ವಿಕಲಚೇತನರ ಪ್ರತಿನಿಧಿಗಳಾದ ಬಸವರಾಜ, ಎಸ್.ತಿಮ್ಮಯ್ಯ, ನಟರಾಜ್ ಮುಂತಾದವರು  ವಿಕಲಚೇತನರನ್ನು ಗುರುತಿಸಿ ಲಸಿಕೆ ಹಾಕಿಸಿದ್ದಕ್ಕೆ ಶಾಸಕರಿಗೆ ಧನ್ಯವಾದಗಳನ್ನ ಅರ್ಪಿಸಿದರು.