ವಿಕಲಚೇತನ ಸ್ನೇಹಿ ಮತಗಟ್ಟೆ : ವಿಕಲಚೇತನರ ಪ್ರತಿನಿಧಿಗಳೊಂದಿಗೆ ಡಿ.ಸಿ ಭೇಟಿ

 ದಾವಣಗೆರೆ.ಏ.೧; ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ವಿಕಲಚೇತನರ ಸ್ನೇಹಿ ಮತಟ್ಟೆಗಳಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತಂತೆ ಜಿಲ್ಲಾಧಿಕಾರಿ ಶಿವಾನಂದ ಪರಿಶೀಲನೆ ನಡೆಸಿದರು.ಶುಕ್ರವಾರ ವಿಕಲಚೇತನ ಪ್ರತಿನಿಧಿಗಳೊಂದಿಗೆ ಮತಗಟ್ಟೆಗಳಿಗೆ ಭೇಟಿ ನೀಡಿ ವಿಕಲಚೇತನರಿಗೆ ಅತ್ಯವಶ್ಯಕವಾದ ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ಸೌಕರ್ಯ ಶೌಚಾಲಯ ಕಲ್ಪಿಸುವ ಕುರಿತಂತೆ ಚುನಾವಣಾ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹಾಗೂ ವಿಕಲಚೇತನರ ಪ್ರತಿನಿಧಿಗಳೊಂದಿಗೆ ಪರಿಶೀಲನೆ ನಡೆಸಿದರು.ಇದೇ ವೇಳೆ ವಿಕಲಚೇತನರ ಅಧಿಕಾರಿ ಪ್ರಕಾಶ್,  ಹಾಗೂ ಮಹಾನಗರಪಾಲಿಕೆ ಚುನಾವಣಾ ಅಧಿಕಾರಿಗಳು, ಇಂಜಿನಿಯರ್‍ಗಳು, ಇತರರು ಉಪಸ್ಥಿತಿರಿದ್ದರು