ವಿಕಲಚೇತನ ಸ್ನೇಹಿ ಕಟ್ಟಡ ಶಾಶ್ವತ ನಿರ್ಮಾಣಕ್ಕೆ ಮನವಿ 

ದಾವಣಗೆರೆ. ಏ.೨೬; ಜಿಲ್ಲೆಯ ಎಲ್ಲಾ ಮತಗಟ್ಟೆಗಳು, ಸರ್ಕಾರಿ ಕಛೇರಿಗಳು ಸಾರ್ವಜನಿಕ ಕಟ್ಟಡಗಳು ವಿಕಲಚೇತನ ಸ್ನೇಹಿ ಕಟ್ಟಡಗಳಾಬೇಕು ಹಾಗೂ ಶಾಶ್ವತವಾಗಿ ವಿಕಲಚೇತನ ಸ್ನೇಹಿಯಾಗಿ ಮಾಡಬೇಕು ಎಂದು ಆರ್ ಪಿ ಡಿ ಟಾಸ್ಕ್ ಫೋರ್ಸ್ ನ ರಾಜ್ಯ ಉಪಾಧ್ಯಕ್ಷೆ ಎಂ.ವಿಜಯಲಕ್ಷ್ಮಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುದಾವಣಗೆರೆ ಜಿಲ್ಲೆಯಲ್ಲಿ  16800 ರಷ್ಟು ವಿಕಲಚೇತನ ಮತದಾರರು ಇರುತ್ತಾರೆ. ಅದರಂತೆ ವಿಕಲಚೇತನ ವ್ಯಕ್ತಿಯು ತನ್ನ ದೈನಂದಿನ ಅವಶ್ಯಕತೆಗಳು ಚಟುವಟುಕೆಗಳನ್ನು ಸಾಧಿಸಲು ಮೂಲಭೂತ ಅವಶ್ಯಕತೆಗಳಲ್ಲಿ ಸಾರ್ವಜನಿಕವಾಗಿ ಅಡೆತಡೆ ರಹಿತ ವಾತಾವರಣ ಅತಿ ಮುಖ್ಯ ಆದರೆ ಈ ಬಗ್ಗೆ ದಾವಣಗೆರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ದುರಂತ ಮುಖ್ಯವಾಗಿ ಚುನಾವಣೆ ಸಂಧರ್ಭದಲ್ಲಿ ವಿಕಲಚೇತನರು ಸಹ ಇತರರಂತೆ ಮತದಾನ ಮಾಡಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಎಲ್ಲಾ ಚುನಾವಣೆಗಳಲ್ಲಿ ಚುನಾವಣಾ ಆಯೋಗದವರು ಹೇಳುತ್ತಾರೆ. ಆದರೆ ಈ ಸೌಲಭ್ಯಗಳಲ್ಲಿ ಅತೀ ಮುಖ್ಯವಾಗಿ ಹೇಳುವುದು ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಂಪ್  ಮತ್ತು ರೈಲಿಂಗ್, ವೀಲ್‌ ಚೇರ್ ಹಾಗೂ ವಿಕಲಚೇತನ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಹೇಳುವ ಚುನಾವಣಾ ಆಯೋಗ, ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ಒಂದು ಕ್ಯಾಂಪ್ ಮತ್ತು ರೈಲಿಂಗ್‌ನ ಗುಣಮಟ್ಟ ಹೇಗಿರಬೇಕು ಎಂದು ಕಿಂಚಿತ್ತು ಜ್ಞಾನ ಇರುವುದಿಲ್ಲ ಎಂದರು ಸರ್ಕಾರಿ ಕಚೇರಿಯಲ್ಲಿ ನಿರ್ಮಾಣ ಮಾಡುವ ವಿಕಲಚೇತನ ಸ್ನೇಹಿ ಕಟ್ಟಡಗಳು 21 ರೀತಿಯ ವಿಕಲಚೇತನರಿಗೂ ಅನಕೂಲವಾಗುವಂತಿರಬೇಕು. ಎಲ್ಲಾ ಮತಗಟ್ಟೆಗಳಲ್ಲಿಯೂ ವಿಕಲಚೇತನರಿಗಾಗಿ ವೀಲ್ ಚೇರ್, ರ್ಯಾಂಪ್, ರೈಲಿಂಗ್, ಸೈನೇಜ್ ಮತ್ತು ಸಂಜ್ಞಾಭಾಷಾಕಾರರುಇರಬೇಕು.  ವಿಕಲಚೇತನರು ವೀಲ್‌ ಚೇರ್ ಮೂಲಕ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ವೈಜ್ಞಾನಿಕವಾದ ರ್ಯಾಂಪ್ ಮತ್ತು ರೈಲಿಂಗ್ ವ್ಯವಸ್ಥೆ ಇರಬೇಕು.ವಿಕಲಚೇತನ ಶೌಚಾಲಯ ಮತ್ತು ಕೈಗೆಟುಕುವಂತೆ ಕುಡಿಯುವ ನೀರು ವ್ಯವಸ್ಥೆ ಇರಬೇಕು. ಈ  ಎಲ್ಲಾ ವ್ಯವಸ್ಥೆಗಳು ವಿಕಲಚೇತನರಿಗಾಗಿ ಮಾತ್ರವಲ್ಲದೆ, ಹಿರಿಯ ನಾಗರಿಕರಿಗೂ, ಗರ್ಭಿಣೀಯರಿಗೂ, ಅನಾರೋಗ್ಯ ಪೀಡಿತರಿಗೂ ಕೂಡಾ ಅತ್ಯಾವಶ್ಯಕವಾಗಿರುತ್ತದೆ ಆದ್ದರಿಂದಈ ಎಲ್ಲಾ ಸೌಲಭ್ಯಗಳನ್ನು  ಜಿಲ್ಲಾಡಳಿತ ಹಾಗೂ  ಚುನಾವಣಾ ಆಯೋಗದವರು ಆದಷ್ಟೂ ಬೇಗನೆ ವಿಕಲಚೇತನ ಸ್ನೇಹಿ ಸೌಲಭ್ಯಗಳನ್ನು ನಿರ್ಮಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ನಾಗಮ್ಮ,ಅಶ್ರಫ್ ಅಲಿ,ಶಂಕ್ರಮ್ಮ,ತಬ್ಸುಮ್,ಮುಕುಂದ,ನಾಗಭೂಷಣ್ ಇದ್ದರು.