ವಿಕಲಚೇತನ ಮಕ್ಕಳ ಪುನರಚ್ಚೇತನ ಕೇಂದ್ರÀಕ್ಕೆ ವಿಜಯಪುರ ತಹಸೀಲ್ದಾರ್ ಭೇಟಿ

ವಿಜಯಪುರ:ನ.25: ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ್ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆ ವಿಜಯಪುರ. ವಿಕಲಚೇತನ ಮಕ್ಕಳ ಪುನರಚ್ಚೇತನ ಕೇಂದ್ರಕ್ಕೆ ವಿಜಯಪೂರ ಜಿಲ್ಲೆಯ ತಹಸೀಲ್ದಾರ್ ಆದಂತ “I.ಊ ತುಂಬಗಿ” ಅವರು ಭೇಟಿ ನೀಡಿದರು. ಕೇಂದ್ರಕ್ಕೆ ಬಂದು ಸಿಬ್ಬಂದಿ ಮತ್ತು ಮಕ್ಕಳೊಂದಿಗೆ ತಮ್ಮ ಅಮೂಲ್ಯ ಸಮಯವನ್ನು ಕಳೆದಿದ್ದರು, ವಿಶೇಷ ಚೇತನ ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆ ಕಂಡು ಹರ್ಷ ವ್ಯಕ್ತಪಡಿಸಿದರು. ಶಿಕ್ಷಣ ವಿಲ್ಲದೆ ಯಾವುದೆ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಪ್ರತಿಯೋಬ್ಬ ವ್ಯಕ್ತಗೆ ಶಿಕ್ಷಣ ತುಂಬಾ ಮುಖ್ಯ
ಸಹನ ಶಿಲತೆ, ಕ್ರೀಯ ಶೀಲತೆ ಮತ್ತು ಮಕ್ಕಳ ಪ್ರೇಮಿ ಆಗಿರತಕ್ಕಂತ ಶ್ರೀ “I.ಊ ತುಂಬಗಿ ತಹಸೀಲ್ದಾರ್ ಇವರು ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಆರೋಗ್ಯ ಅಭಿವೃದ್ದಿಪಡಿಸಿ ಸಮಾಜದ ಮುಖ್ಯವಾಹಿನಿಗೆತರುವ ಕಾರ್ಯವನ್ನು ಮಾಡುವುದು ಅತ್ಯಂತ ಸ್ಲಾಘನಿಯವಾಗಿದೆ. ಇಂತಹ ಮಕ್ಕಳಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸುವುದು ಮತ್ತು ತಕ್ಷಣದಲ್ಲಿಯೆ ವಿಷೇಶ ಚೇತನ ಮಕ್ಕಳಿಗೆ ಸಿಗಬೇಕಾಗಿದಂತ ಆಧಾರ್ ಕಾಡ್, ಅಂಗವಿಕಲರ ಗುರುತಿನ ಚೀಟಿ ಮತ್ತು ಮಾಶಾಸನ ಒದಗಿಸುವುದಾಗಿ ಭರವಸೆ ನೀಡಿದರು. ಪ್ರತಿನಿತ್ಯ ಮಕ್ಕಳಿಗೆ ದೈಹಿಕ ವ್ಯಯಾಮ ಮತ್ತು ಮಾನಸಿಕವಾಗಿ ಸಧೃಢಗೊಳಿಸುವ ಚಟುವಟಿಕೆಯನ್ನು ಕೈಗೊಳ್ಳಲು ಸಿಬ್ಬಂದಿಗೆ ಸಲಹೆ ನೀಡಿದರು. ಇಲ್ಲಿ ಭೇಟಿ ನೀಡಿದಾಗ ಸಿಬ್ಬಂದಿಗಳು ಇಂತಹ ಮಕ್ಕಳ ಮೇಲೆ ತೋರುವ ಪ್ರೀತಿ ನಿಜಕ್ಕೂ ನಾನು ನನ್ನ ಜೀವನದಲ್ಲಿ ಕಂಡಿಲ್ಲ ಎಂದು ಸಂತೂಷ ವ್ಯಕ್ತಪಡಿಸಿದರು.
ಉಪಸ್ಥಿತಿ: ಶ್ರೀಯುತ ಪ್ರಶಾಂತ ದೇಶಪಾಂಡೆ ವಿ.ಎಸ್.ಡಿ.ಇ.ಎಸ್.ಸಂಸ್ಥೆಯ ಸಂಸ್ಥಾಪಕರು, ಶ್ರೀಮತಿ ಕವೀತಾ ಗದ್ವಾಲ್, ಶ್ರೀಮತಿ ಅಶ್ವಿನಿ ಬರಹಾಣಪೂರ, ಕುಮಾರಿ ಕಸ್ತೂರಿ ಕಾಂಬಳೆ, ಕುಮಾರಿ ಪೂಜಾ ಜೆಡಗೆ, ಸಂಭಾಜಿ, ಮತ್ತು ಮುದ್ದು ಮಕ್ಕಳು ಇದ್ದರು.