ವಿಕಲಚೇತನ ಮಕ್ಕಳ ಅಭಿವೃದ್ದಿಗೆ ಶ್ರಮಿಸಲು ಕರೆ


ಧಾರವಾಡ,ಜ.2: ಮಕ್ಕಳಲ್ಲಿರುವ ಶೃಜನಶೀಲತೆಯನ್ನು ಗುರತಿಸುವ ಜವಾಬ್ದಾರಿ ಪಾಲಕರ ಕೈಯಲ್ಲಿದೆ ಕಾರಣ ಪಾಲಕರು ಜವಾಬ್ದಾರಿ ಅರಿತು ವಿಕಲಚೇತನ ಮಕ್ಕಳ ಅಭಿವೃದ್ದಿಗಾಗಿ ಶ್ರಮಿಸಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಈರಣ್ಣ ಸಿ. ಜಡಿ ಅವರು ಕರೆನೀಡಿದರು.
ಪೋಥ್ ವೇವ್ ಪೌಂಡೇಶನ್,ಡೆಕಾತ್ಲಾನ್, ಬೆಂಗಳೂರು ಮತ್ತು ಧಾರವಾಡ ಇವರು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಧಾರವಾಡ ತಾಲೂಕಾ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಕಲಚೇತನ ಮಕ್ಕಳಿಗೆ ಉಚಿತವಾಗಿ ಆಹಾರ ದಾನ್ಯಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ವಿಕಲಚೇತನ ಮಕ್ಕಳು ದೇವರ ಮಕ್ಕಳು ಇದ್ದಹಾಗೆ ಅವರಿಗೆ ಅನುಕಂಪ ತೋರಿಸದೇ ಅವಕಾಶ ನೀಡುವ ಜವಾಬ್ದಾರಿ ಶಿಕ್ಷಕರು, ಪಾಲಕರು ಹಾಗೂ ಸಮುದಾಯದ ಆಧ್ಯ ಕರ್ತವ್ಯವಾಗಿದೆ. ಆದ್ದರಿಂದ ಕೇವಲ ದಿನಸಿ ಕಿಟ್ಟಗಳನ್ನು ಪಡೆದುಕೊಂಡು ಹೋಗುವುದು ಮಾತ್ರ ತಮ್ಮ ಜವಾಬ್ದಾರಿಯಲ್ಲ ಅಂತಹ ಮಕ್ಕಳ ಶಿಕ್ಷಣ ಹಾಗೂ ಜೀವನ ಕೌಶಲ್ಯಗಳ ಕುರಿತು ಚಿಂತಿಸುವ ಕಾರ್ಯ ಎಲ್ಲರಿಂದ ಆಗಲಿ ಅದರಲ್ಲಿ ಮುಂದೆ ಬಂದಿರುವ ಪೋಥ್ ವೇವ್ ಪೌಂಡೇಶನದವರು ಹುಬ್ಬಳ್ಳಿ ಧಾರವಾಡಗಳಲ್ಲಿ ಶಾಲಾ ಸಿದ್ದತಾ ಕೇಂದ್ರಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಸುಮಾರು 200 ಮಕ್ಕಳಿಗೆ ಜೀವನ ಕೌಶಲ್ಯಗಳ ತರಬೇತಿಯನ್ನು ನೀಡುತ್ತಾ ಬಂದಿರುವುದು ಶ್ಲ್ಯಾಘನೀಯ ಎಂದಿದ್ದಾರೆ.
ತಾಲೂಕ ಪಂಚಾಯತ ಕಾರ್ಯನಿರ್ವಹಣಾದಿಕಾರಿಗಳಾದ ಎಸ್.ಎಸ್. ಕಾದ್ರೋಳ್ಳಿಯವರು ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ನಿವೃತ್ತರಾದ ಪಿ.ಆರ್. ಜವಳಿ, ಚಬ್ಬಿ, ಪಿ.ಆರ್. ಭಜಂತ್ರಿ ಅವರುಗಳಿಗೆ ಅಭಿನಂದನಾ ಪತ್ರ ಮತ್ತು ಸಸಿಗಳನ್ನು ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ, ಶಿಕ್ಷಣ ಸಂಯೋಜಕರಾದ ಸೈಯದ, ಎಮ್.ಎನ್. ಸತ್ತೂರ ಉಪಸ್ಥಿತರಿದ್ದರು.
ಅದ್ಯಕ್ಷತೆ ವಹಿಸಿದ್ದ ಧಾರವಾಡ ತಾಲೂಕಾ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎನ್.ಎಸ್. ದಪ್ಪೇದಾರ ಅವರು ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ಒಟ್ಟು 506 ವಿಕಲಚೇತನ ಮಕ್ಕಳಿದ್ದಾರೆ. ಅವರಲ್ಲಿ 70 ಮಕ್ಕಳು ಶಾಲಾ ಸಿದ್ದತಾ ಕೇಂದ್ರಕ್ಕೆ ಬರುತ್ತಿದ್ದಾರೆ. ಅವರಿಗೆ ಜೀವನ ಕೌಶಲ್ಯಗಳನ್ನು ರೂಡಿಸುವ ಕಾರ್ಯ ನಮ್ಮಿಂದ ನಡೆಯುತ್ತಿದೆ. ಅಂತಹ ಮಕ್ಕಳ ವೈದಕೀಯ ತಪಾಸನೆ, ಶಿಕ್ಷಣ ಹಾಗೂ ಇನ್ನಿತರ ಸೃಜನಾತ್ಮಕ ಚಟುವಟಿಕೆಗಳಿಗೆ ವೇದಿಕೆಯನ್ನು ಸೃಷ್ಟಿಸುವ ಕಾರ್ಯ ನಮ್ಮ ದಾಗಿದೆ. ಒಟ್ಟಿನಲ್ಲಿ ವಿಕಲಚೇತನ ಮಕ್ಕಳು ಯಾವುದೇ ತೊಂದರೆ ಇಲ್ಲದೆ ಮುಖ್ಯವಾಹಿನಿಗೆ ಬರುಬೇಕೆಂಬ ಮಹತ್ವಾಕಾಂಕ್ಷೇ ನಮ್ಮದಾಗಿದೆ ಆ ನಿಟ್ಟಿನಲ್ಲಿ ನಮ್ಮ ಕೇಂದ್ರ ಕಾರ್ಯಮಾಡುತ್ತಿದೆ ಎಂದು ಹೇಳಿದರು.
ನನಗೂ ಶಾಲೆ ಕಾರ್ಯಕ್ರಮ ಕೋಆಡಿನೇಟರ ಆದ ಬಸವರಾಜ ಮ್ಯಾಗೇರಿ ಅವರು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಕೀರ್ತಿವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಹೊನ್ನವಾಡ ಒಂದಿಸಿದರು. ಸೊನ್ನಹಳ್ಳಿ ನಿರೂಪಿಸಿದರು. ಧಾರವಾಡ ತಾಲೂಕಿನ ಸುಮಾರು 50 ಮಕ್ಕಳು ಉಚಿತ ಕಿಟ್ ಗಳನ್ನು ಪಡೆದುಕೊಡರು.