
ಬಾದಾಮಿ,ಮಾ8: ಸಾಮಾನ್ಯ ಮಕ್ಕಳಂತೆ ವಿಕಲಚೇತನ ಮಕ್ಕಳಿಗೆ ಸಮಾನ ಅವಕಾಶ ಸಿಗಲಿ. ವಿಕಲಚೇತನ ಮಕ್ಕಳಿಗೆ ಸಹಿತ ಸಾಮಾನ್ಯ ಮಕ್ಕಳಂತೆ ಪ್ರವಾಸ ಹಮ್ಮಿಕೊಂಡಿರುವುದು ಇಲಾಖೆಯ ಕಾರ್ಯ ಪ್ರಶಂಸನೀಯ ಎಂದು ಬಾದಾಮಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ ಹೇಳಿದರು.
ಅವರು ಪಟ್ಟಣದ ಆನಂದನಗರದ ಬಿಇಒ ಕಚೇರಿ ಹತ್ತಿರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ಕ್ರೀಡೆ ಮತ್ತು ಕ್ಷೇತ್ರ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ವೈ.ಬಿ.ಚಲವಾದಿ, ಬಿ.ಐ.ಇ.ಆರ್.ಟಿ. ಯವರಾದ ಎನ್.ಡಿ.ಬೀಳಗಿ, ಎಸ್.ಎಸ್.ಚೌಕದ, ಎಚ್.ಆರ್.ಕಡಿವಾಲ, ಕೆ.ಎಸ್.ಮಸಬಿನಾಳ, ವಿಕಲಚೇತನ ಮಕ್ಕಳು, ಪಾಲಕರು ಹಾಜರಿದ್ದರು. ಬಾದಾಮಿಯಿಂದ ಆಲಮಟ್ಟಿ, ಯಲಗೂರ, ಕೂಡಲಸಂಗಮ ಕ್ಷೇತ್ರಗಳಿಗೆ ತಾಲೂಕಿನ 52 ವಿಕಲಚೇತನ ಮಕ್ಕಳು ಒಂದು ದಿನದ ಪ್ರವಾಸ ಮಾಡಿದರು.