ವಿಕಲಚೇತನ ಮಕ್ಕಳಿಗೆ ವೀಲ್‍ಚೇರ್ ವಿತರಣೆ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.18:- ಮೈಸೂರಿನ ಶಿವರಾಂಪುರದಲ್ಲಿರುವ ನವಚೇತನ ಬಸವೇಶ್ವರ ಟ್ರಸ್ಟ್‍ನಲ್ಲಿರಿರುವ ವಿಕಲಚೇತನ ಮಕ್ಕಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ಹಸ್ತಾಂತರ ಮಾಡಲಾಯಿತು.
ಬೆಂಗಳೂರು ಮೂಲದ ಡಾ.ಪ್ರದೀಪ್ ಮತ್ತು ಪೂಜಾ ದಂಪತಿ ಪುತ್ರಿ ಪುಟಾಣಿ ಆರಾಧ್ಯಳ ಹುಟ್ಟುಹಬ್ಬದ ಪ್ರಯುಕ್ತ ಈ ರೀತಿಯ ಸೇವೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹೆಚ್.ವಿ.ರಾಜೀವ್, ಹುಟ್ಟುಹಬ್ಬ ಎಂದರೆ ಮೋಜು ಮಸ್ತಿ ಎನ್ನುವ ಈ ಕಾಲಘಟ್ಟದಲ್ಲಿ ಆ ಮಗುವಿನ ಹುಟ್ಟುಹಬ್ಬವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಎಲ್ಲರೂ ತಮ್ಮ ತಮ್ಮ ಹುಟ್ಟುಹಬ್ಬವನ್ನು ಇಂತಹ ಮಕ್ಕಳೊಂದಿಗೆ ಆಚರಿಸಿ ಎಂದು ಕರೆ ಕೊಟ್ಟರು. ಮೂರು ವರ್ಷಗಳಿಂದ ಇತರ ವಿಶೇಷ ಮಕ್ಕಳ ಶಾಲೆಗಳನ್ನು ಹುಡುಕಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡಲು ಸಹಕರಿಸುತ್ತಿರುವ ರಂಗನಾಥ ಅವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಸುಮಾರು ಒಂದು ಲಕ್ಷ ರೂ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಿದರು. ತಾವೂ ಕೂಡ ಐವತ್ತು ಸಾವಿರ ರೂಗಳನ್ನು ಕೊಡುಗೆಯಾಗಿ ನೀಡುವುದಾಗಿ ಪ್ರಕಟಿಸಿದರು.
ನಂತರ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಮರಿಗೌಡ, ನಮ್ಮಲ್ಲಿರುವ ಮಕ್ಕಳಿಗೆ ಊಟ ತಿಂಡಿ ಮಕ್ಕಳನ್ನು ಕರೆದೊಯ್ಯುವ ವಾಹನಕ್ಕೆ ಪೆಟ್ರೋಲ್ ಅಥವ ಬೇರೆ ಏನಾದರು ಕೊಡುಗೆ ನೀಡಬೇಕಾದಲ್ಲಿ ದಯಮಾಡಿ 88614 87299 ಸಂಪರ್ಕಿಸಿ ಎಂದರು.
ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕ ರಂಗನಾಥ, ಬಸಪ್ಪ, ಸಿದ್ದಣ್ಣ, ಸಿದ್ದರಾಮು, ರಾಮು, ಪ್ರಶಾಂತ್, ಶೇಷ ಪ್ರಸಾದ್, ವಿಕ್ರಮ ಅಯ್ಯಂಗಾರ್, ಪ್ರಕಾಶ್ ಪ್ರಿಯದರ್ಶನ್, ಜಯಂತ್, ಎಸ್ ಎನ್ ರಾಜೇಶ್, ರಾಕೇಶ್, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.