ವಿಕಲಚೇತನಿರಿಗಾಗಿ ಉದ್ಯೋಗ ಶಿಬಿರ

ಶಹಾಪುರ:ಜ.14:ತಾಲುಕಿನ ವಿಕಲಚೇತನರಿಗಾಗಿ ದಿ.ಅಸೋಶಿಯಷನ್ ಆಫ್.ಫೀಪಲ್. ವಿಥ್ ಡೆಜೆಬಲಿಟಿ,ಸಂಸ್ಥೆ ಬೆಂಗಳೂರ. ಮತ್ತು ವೀಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ಯಾದಗಿರಿ. ಹಾಗೂ ತಾ,ಪಂ, ಶಹಾಪುರ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯೋಗದಲ್ಲಿ 18ರಿಂದ 35 ವರ್ಷ ಒಳಗಿನ ನಿರುದ್ಯೋಗಿ ವಿಕಲಚೇತನರಿಗೆ ಉಧ್ಯೋಗ ಶಿಬಿರದ ಮತ್ತು ತರಬೇತಿ ಕಾರ್ಯಕ್ರಮ ತಾ,ಪಂ, ಸಭಾಂಗಣದಲ್ಲಿ ಜರುಗಿತು.ತಾ,ಪಂ, ಅಧ್ಯಕ್ಷರಾದ ಹಣಮಂತ್ರಾಯ ದೊರಿಯವರು ಕಾರ್ಯಕ್ರಮ ಉಧ್ಘಾಟಿಸಿದರು. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿದ್ದಲಿಂಗಣ್ಣಗೌಡ ಪಾಟೀಲ. ಯೋಜನಾಧಿಕಾರಿಗಳಾದ ರಾಘವೆಂದ್ರ ಕುಲಕರ್ಣಿ. ಎಸಿಡಿಪಿಓ ಮಲ್ಲಣ್ಣ ದೆಸಾಯಿ. ಕು,ದೀಪಿಕಾ. ತಾಲುಕಾ ಅಂಗವೀಕಲರ ಸಂಘದ ಅಧ್ಯಕ್ಷರಾದ ಸಾಹೇಬ ಜಾನಿ ಬಾಬು ಮತ್ತುಎಮ್,ಆರ್, ಡಬ್ಲ್ಯೂ ನಾಗರಾಜ ಮುಲ್ಕಿ. ಉಧ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿಗಳಾದ ನಿರಂಜನ ಟಿ. ಆಗಮಿಸಿದ್ದರು. ಬಸವರಾಜ ಹಬ್ಬಳ್ಳಿ ಸ್ವಾಗತಿಸಿದರು. ಶವಿಯೋಗಪ್ಪ ಮೇಲಕೇರಿ ನೀರೂಪಿಸಿದರು. ಶ್ರೀಧರ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಶಿಬಿರದಲ್ಲಿ ನಾನಾ ಗ್ರಾಮಗಳಿಂದ ವಿಕಲಚೇತನರು ಆಗಮಿಸಿದ್ದರು.