ವಿಕಲಚೇತನರ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲು ಒತ್ತಾಯ

ಲಿಂಗಸುಗೂರು.ಜು.೨೧- ಕರ್ನಾಟಕ ರಾಜ್ಯ ಅಂಗವಿಕಲರ ಆರ್‌ಪಿಡಿ ಟಾಸ್ಕ್ ಫೋರ್ಸ್ ಸಮಿತಿಯ ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ: ದಿನಾಂಕ ೧೨-೦೧-೨೦೨೨ ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ, ಆರ್ಟಿಫಿಶಿಯಲ್ ಲಿಂಟ್ಸ್ ಮ್ಯಾನುಫ್ಯಾಕ್ಟರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಬೆಂಗಳೂರು ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ ರಾಯಚೂರು ಇವರುಗಳ ಸಹಯೋಗದಲ್ಲಿ ವಿಕಲಚೇತನರಿಗೆ ಅವರಿಗೆ ಅವಶ್ಯಕತೆವುಳ್ಳ ವಿವಿಧ ಸಾಧನ ಸಲಕರಣೆಗಳನ್ನು ಒದಗಿಸಲು ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಸುಮಾರು ೩೦೦ ಕ್ಕೂ ಹೆಚ್ಚಿನ ವಿಕಲಚೇತನರು ಭಾಗವಹಿಸಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ತಮಗೆ ಅವಶ್ಯಕತೆ ಇರುವ ಸಾಧನ ಸಲಕರಣೆಗಳನ್ನು ನೊಂದಣಿ ಮಾಡಲಾಗಿತ್ತು. ಕಾರಣ ಈಗಾಗಲೇ ಶಿಬಿರದಲ್ಲಿ ತಪಾಸಣ ಮಾಡುವ ಮೂಲಕ ಗುರುತಿಸಿದ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲು ಆಲಿಸ್ಕೋ ಕಂಪನಿಯವರು ಸುಮಾರು ೪ ತಿಂಗಳುಗಳ ಹಿಂದೆ ಸಾಧನ ಸಲಕರಣೆಗಳನ್ನು ಲಿಂಗಸುಗೂರು ತಾಲೂಕಿಗೆ ಸರಬರಾಜು ಮಾಡಲಾಗಿದ್ದು ಲಿಂಗಸುಗೂರಿನ ವಿಕಲಚೇತನರ ಭವನದಲ್ಲಿ ಇಡಲಾಗಿದೆ, ಸಾಧನ ಸಲಕರಣೆಗಳು ಬಂದು ೪ ತಿಂಗಳಾದರೂ ವಿತರಣೆ ಮಾಡದೇ ಇರುವುದರಿಂದನ ಕಳೆದ ೧೫ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತುಕ್ಕು ಹಿಡಿಯುವ ಪರಿಸ್ಥಿತಿಯಲ್ಲಿದ್ದು, ಕೂಡಲೇ ತಾವುಗಳು ಇದರ ಬಗ್ಗೆ ಗಮನ ಹರಿಸಿ ಕೂಡಲೇ ಸಾಧನ ಸಲಕರಣೆಗಳನ್ನು ವಿಕಲಚೇತನ ಫಲಾನುಭವಿಗಳಿಗೆ ಶೀಘ್ರವಾಗಿ ವಿತರಣೆ ಮಾಡಲು ವಿಕಲಚೇತನರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.