ವಿಕಲಚೇತನರ ಸಮಸ್ಯೆಗಳ ಪರಿಹಾರಸಮಸ್ಯೆಕ್ಕೆ ಪ್ರಯತ್ನ:ಶ್ರೀದೇವಿ ನಿಡಗುಂದಿ

ಕೊಪ್ಪಳ ನ 03 : ವಿಕಲಚೇತನರ ಸಮಸ್ಯೆಗೆ ಪರಿಹಾರ ಹಾಗೂ ವಿಕಲಚೇತನರಿಗೆಇರುವ ವಿವಿಧ ಸೌಲಭ್ಯಗಳ ಕುರಿತುಜಾಗೃತಿ ಮೂಡಿಸುವಕಾರ್ಯವನ್ನು ಪ್ರಮಾಣಿಕರೀತಿಯಲ್ಲಿ ಪ್ರಯತ್ನ ಮಾಡುವುದಾಗಿ ನೂತನಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ ಶ್ರೀದೇವಿ ನಿಡಗುಂದಿ ಹೇಳಿದರು.
ಅವರು ನಗರದ ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೂತನವಾಗಿಅಧಿಕಾರಿಯಾಗಿಕರ್ತವ್ಯಕ್ಕೆ ಹಾಜರಾದ ನಿಮಿತ್ಯ ವಿಕಲಚೇತನ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ,ವಿಕಲಚೇತನರ ಸೇವೆಯನ್ನು ಮಾಡುವುದುದೇವರ ಸೇವೆಯನ್ನು ಮಾಡಿದಷ್ಟು ಸಮಾನವಾದಕಾರ್ಯವಾಗಿದೆ.ವಿಕಲಚೇತನರಿಗೆಇಲಖೆಯಿಂದ ಅನೇಕ ಯೋಜನೆಗಳಿದ್ದು ಅವುಗಳ ಬಗ್ಗೆ ಜಾಗೃತಿ ಮೂಡಿಸುವಂತ ಕೆಸಲವನ್ನುಕೂಡಾ ಮಾಡಲಾಗುತ್ತದೆ.ವಿಕಲಚೇತನರಿಗೆ ಸಂಬಂಧಿಸಿದ ಯಾವುದೇಸಮಸ್ಯೆಗಳಿದ್ದರೂ ಕೂಡಾ ಅವುಗಳ ಪರಿಹಾರಕ್ಕೆ ಪ್ರಯತ್ನ ಮಾಡುತ್ತೆನೆ.ಇಲಾಖೆಯ ಕಾರ್ಯಗಳು ಉತ್ತಮರೀತಿಯಲ್ಲಿ ಸಾಗಬೇಕಾದರೆ ಸಮುದಾಯವರ ಸಹಹಾರಜೊತೆಗೆ ವಿಶೇಷವಾಗಿ ವಿಕಲಚೇತನರ ಸಹಕಾರ ಬಹಳ ಮುಖ್ಯವಾಗಿದೆಎಂದು ಹೇಳಿದರು.
ವಿಕಲಚೇತನ ನೌಕರರ ಸಂಘದರಾಜ್ಯಾಧ್ಯಕ್ಷರಾದ ಬೀರಪ್ಪಅಂಡಗಿ ಚಿಲವಾಡಗಿ ಮಾತನಾಡಿ,ವಿಕಲಚೇತನರು ಅನೇಕ ಸೌಲಭ್ಯಗಳಿದ್ದು ಅಂತಹ ಸೌಲಭ್ಯಗಳ ಸರಿಯಾದರೀತಿಯ ಬಳಕೆಯಾಗಬೇಕು.ಬೇರೆ ಇಲಾಖೆಯಲ್ಲಿಆಯಾ ಇಲಾಖೆಗೆ ಸಂಬಂಧಿಸಿದ ತಾಲೂಕಅಧಿಕಾರಿಇರುತ್ತಾರೆಆದರೆ ವಿಕಲಚೇತನರಇಲಾಖೆಯಲ್ಲಿಜಿಲ್ಲೆಗೆಒಬ್ಬಅಧಿಕಾರಿ ಮಾತ್ರಇದ್ದು,ಜಿಲ್ಲೆಯಕೊನೆಯ ಹಳ್ಳಿಯಿಂದ ವಿಕಲಚೇತನರುತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸೌಲಭ್ಯ ಪಡೆಯಲು ಬರುವುದರಿಂದಅಂತಹ ವಿಕಲಚೇತನರ ಸಮಸ್ಯೆಗಳನ್ನು ಸರಿಯಾದರೀತಿಯಿಂದ ಹಾಲಿಸುವ ಕೆಲಸವಾಗಬೇಕಿದೆ.ರಾಜ್ಯದ ಅನೇಕ ಕಡೆಯಲ್ಲಿಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳು ನಿಯೋಜನೆಯ ಮೇಲೆ ಕಾರ್ಯ ಮಾಡುತ್ತಿದ್ದು,ಸರಕಾರವು ಶೀಘ್ರವೇ ಖಾಯಂಅಧಿಕಾರಿಯನ್ನು ನೇಮಕ ಮಾಡುವಕಾರ್ಯವನ್ನು ಮಾಡಬೇಕಿದೆ.ಅಂದಾಗ ಮಾತ್ರ ವಿಕಲಚೇತನರ ಇಲಾಖೆ ಅಭಿವೃದ್ದಿ ಹೋಂದಲು ಸಾಧ್ಯವಾಗುತ್ತದೆಎಂದು ಹೇಳಿದರು.
ಜಿಲ್ಲಾಖಜಾಂಚಿ ಕಾಶಿನಾಥ ಶಿರಿಗೇರಿ ಮಾತನಾಡಿ,ವಿಕಲಚೇತನರಕಲ್ಯಾಣಇಲಾಖೆಯಲ್ಲಿಕಾರ್ಯ ಮಾಡುವ ಅಧಿಕಾರಿಗಳು ವಿಕಲಚೇತನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಮುಟ್ಟಿಸುವಕಾರ್ಯವನ್ನು ಮಾಡಬೇಕಿದೆ.ಅಲ್ಲದೇ ಸರಕಾರ ಕೇವಲ ಡಿ.3ರ ವಿಶ್ವ ವಿಕಲಚೇತನ ದಿನಾಚರಣೆಯ ದಿನದಂದು ಮಾತ್ರ ಭಾಷಣಕ್ಕೆ ಮಾತ್ರ ಸಿಮೀತವಾಗಿರಬಾರದು.ವಿಕಲಚೇತನರಿಗೆ ಅವರಅಂಗವೈಕಲ್ಯತೆಗೆಅನುಗುಣವಾಗಿಕೌಶಲ್ಯತೆಗೆತಕ್ಕಂತೆಉದ್ಯೋಗ ನೀಡುವ ಬಗ್ಗೆ ಗಮನಹರಿಸಬೇಕಿದೆಎಂದು ಹೇಳಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದರಾಜ್ಯಖಜಾಂಚಿ ಮಂಜುನಾಥ ಹಿಂಡಿಹುಳ್ಳಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾ ಶಂಕ್ರಮ್ಮ ಬಂಗಾರಶೆಟ್ಟರ್,ನಾಗಪ್ಪ ದೇವನಾಳ,ತಾಲೂಕ ಅಧ್ಯಕ್ಷರಾದಅಂದಪ್ಪಇದ್ಲಿ,ನಿರ್ದೇಶಕರಾದ ಸುರೇಶಚಿನ್ನೂರು,ಅಶೋಕಕಂಚಗಾರ ,ಶಿಕ್ಷಕರಾದ ದೇವಪ್ಪ ಒಂಟಿಗಾರ,ರಾಕೇಶ.ಕೆ.ಸಿ.,ಸುಮಂಗಲಾ ಹೊರಗಿನಮಠ,ಶ್ವೇತಾಕುಲಕರ್ಣಿ,ಸಂತೋಷಕುಮಾರ ಹೊರಗಿನಮಠ ಮುಂತಾದವರು ಹಾಜರಿದ್ದರು.