ವಿಕಲಚೇತನರ ಬೇಡಿಕೆ ಈಡೇರಿಕೆಗೆ ಒತ್ತಾಯ

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೦೫ ತಾಲೂಕು ವಿಕಲಚೇತನರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಂಧನೂರು ತಾಲೂಕು ವಿಕಲಚೇತನರ ಸಂಘದ ವತಿಯಿಂದ ತಹಶಿಲ್ದಾರ ರಿಗೆ ಮನವಿಯನ್ನು ಸಲ್ಲಿಸಿದರು.
ವಿಕಲಚೇತನರ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದರೂ ಏಳೆಂಟು ತಿಂಗಳ ವಿಳಂಬ ಮಾಡುತ್ತಿರುವುದು, ಪ್ರತಿ ತಿಂಗಳು ಬರುವ ಮಾಸಾಶನ ಫಲಾನುಭವಿ ಗಳಿಗರ ತಲುಪುತ್ತಿಲ್ಲ ,ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆದು ಕುಂದು ಕೊರತೆ ಸಭೆ ನಡೆಸಬೇಕು ,ಸರ್ಕಾರದ ಆದೇಶದ ಪ್ರಕಾರ ವಿಕಲಚೇತನರ ಶೇ ೫% ಅನುದಾನ ವನ್ನು (ನಗರಸಭೆ ಪೌರಾಯುಕ್ತರು ,ತಾಲೂಕು ಪಂಚಾಯತಿ ಇಒ, ಪಿಡಿಒ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ) ಅಧಿಕಾರಿಗಳಿಗೆ ಖರ್ಚು ಮಾಡುವಂತೆ ಸೂಚನೆ ನೀಡಬೇಕು.
ಎಂ.ಆರ್ ಡಬ್ಲ್ಯೂ, ವಿ.ಆರ್ ಡಬ್ಲ್ಯೂ, ಯು.ಆರ್.ಡಬ್ಲ್ಯೂಗಳಿಗೆ ಶೇ.೫% ಅನುದಾನದಲ್ಲಿ ಟೇಬಲ್, ಕುರ್ಚಿ, ಕಂಪ್ಯೂಟರ್, ಅಲಮಾರಿ ವ್ಯವಸ್ಥೆ ಮಾಡಬೇಕು ಹಾಗೂ ಸ್ಟೇಶನರಿ ಹಾಗೂ ಪ್ರಯಾಣ ವೆಚ್ಚ ಭರಿಸಬೇಕು.
ಈ ಮೇಲೆ ತಿಳಿಸಿದಂತೆ ಶೇ.೫% ಅನುದಾನ ಬಳಕೆಗೆ ಕ್ರಿಯಾ ಯೋಜನೆ ತಯಾರಿಸುವಾಗ ವಿಕಲಚೇತನರ ಪ್ರಮುಖ ರನ್ನು ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು .ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರವಣ ದೋಷ ,ಕಣ್ಣು ದೋಷ ವೈದ್ಯರು ಇದ್ದರೂ ಪ್ರಮಾಣ ಪತ್ರ ಕೊಟ್ಟಿರುವುದಿಲ್ಲ ಮೇಲಾಧಿಕಾರಿಗಳ ಗಮನಕ್ಕೆ ತಂದು ವಿಕಲಚೇತನರಿಗೆ ಯು.ಡಿ.ಐ.ಡಿ ಕಾರ್ಡ್ ಗಳನ್ನು ಕೊಡಲು ಆದೇಶ ನೀಡಲು ಸೂಚಿಸಬೇಕು. ಸಿಂಧನೂರು ನಗರದಲ್ಲಿನ (ವಾರ್ಡ್-೨೯) ವಿಕಲಚೇತನರ ಭವನ ಸುಮಾರು ಎಂಟು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ ಇದನ್ನು ಪೂರ್ಣಗೊಳಿಸಿ ಸೇವೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಯಲ್ಲಿ ಒತ್ತಾಯಿಸಿದರು. ವಿಕಲಚೇತನರ ಪ್ರಮುಖರಾದ ತಾಲೂಕ ಅಧ್ಯಕ್ಷರಾದ ಬಸವರಾಜ ಎಂಆರ್‌ಡಬ್ಲೂ, ಮಹ್ಮದ್ ಹುಸೇನ್ ಸಾಬ ಪರಾಪುರ, ದೇವೇಂದ್ರ ಗೌಡ, ಹನುಮಂತ ಗಿಣಿವಾರ, ಕೆ.ಬೀರಪ್ಪ ಗೋರೆಬಾಳ, ವೀರಭದ್ರಪ್ಪ ಜಾಲಿಹಾಳ, ನಾಗಪ್ಪ ಸುಕಾಲಪೇಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.