ವಿಕಲಚೇತನರ ಪ್ರತಿಭೆ ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆಃ ಜಿಲ್ಲಾಧಿಕಾರಿ

ವಿಜಯಪುರ, ಜು.30-ಸಮರ್ಥನಂ ಅಂಗವಿಕಲರ ಸಂಸ್ಥೆಯು ಬಾಕ್ರ್ಲೇನ್ ಸಹಕಾರದೊಂದಿಗೆ ಯುವ ವಿಕಲಚೇತನರಿಗಾಗಿ ವಿಜಯಪುರ ವಿಭಾಗ ಮಟ್ಟದ ಉದ್ಯೋಗ ಮೇಳವನ್ನು ವಿಜಯಪುರ ನಗರದ ರೂಡ್ ಸೆಟ್ ಆವರಣದಲ್ಲಿ ಆಯೋಜನೆ ಮಾಡಲಾಯಿತು. ಸದರಿ ಮೇಳವನ್ನು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ಬಿ ದಾನಮ್ಮನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ್, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ರಾಜಶೇಖರ್, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಗಂಗಾಧರ್.ಬಿ.ಎಸ್, ಸಮರ್ಥನಂ ಅಂಗವಿಕಲರ ಸಂಸ್ಥೆಯ ಮಲ್ಲಿಕಾರ್ಜುನ್, ಅರುಣ್ ಕುಮಾರ್, ದೇವರಾಜು ಸೇರಿದಂತೆ ಮತ್ತಿತ್ತರರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.
ಇಂದು ವಿಕಲಚೇತನರು ಸವಾರ್ಂಗರಿಗಿಂತ ಎಲ್ಲ ವಿಷಯಗಳಲ್ಲೂ ಮಿಗಿಲಾಗಿದ್ದು, ಅವರ ಪ್ರತಿಭೆ ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ಅಭಿಪ್ರಾಯಪಟ್ಟರು. ವಿಶೇಷ ಚೇತನರಿಗೆ ಆತ್ಮವಿಶ್ವಾಸದಿಂದ ಬದಕಲು ಸಮರ್ಥನಂ ಅಂಗವಿಕಲರ ಸಂಸ್ಥೆ ಅಗತ್ಯ ಸಹಕಾರ ನೀಡುತ್ತ ಬರುತ್ತಿದ್ದಾರೆ. ಇವರು ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸುತ್ತಿದ್ದಾರೆ ಇವರಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು. ಅಲ್ಲದೆ ಉದ್ಯೋಗಂ ಪುರುಷ ಲಕ್ಷಣಂ ಅಂತ ಕಾಲವಿತ್ತು ಆದರೆ ಈಗ ಉದ್ಯೋಗಂ ಮನುಷ್ಯ ಲಕ್ಷಣಂ ಎಂತಾಗಿದೆ, ಎಲ್ಲಾ ವಿಕಲಚೇತನರು ಎಲ್ಲಿ ಉದ್ಯೋಗ ಅವಕಾಶ ದೊರೆಯುತ್ತದೆ ಅಲ್ಲಿಗೆ ಹೋಗಿ ಉದ್ಯೋಗ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರಾಜಶೇಖರ್ ಮಾತನಾಡಿ, ವಿಶೇಷಚೇತನರು ಸಾಮಾನ್ಯ ನಾಗರೀಕರಿಗಿಂತಲೂ ಹೆಚ್ಚು ಕೆಲಸ ಮಾಡುವ ಸಮಾಥ್ರ್ಯವನ್ನು ಹೊಂದಿದ್ದಾರೆ, ಯಾವುದೇ ಆತಂಕವಿಲ್ಲದೆ ಉತ್ಪಾದನಾ ಕ್ಷೇತ್ರದ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ, ಕೊವಿಡ್ ಇದ್ದ ಕಾರಣ ಎರಡು ವರ್ಷಗಳ ಕಾಲ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಇಂತಹ ಸಂದರ್ಭದಲ್ಲಿ ಸಮರ್ಥನಂ ಸಂಸ್ಥೆ ಉದ್ಯೋಗ ಮೇಳ ಮಾಡುತ್ತಿರುವುದು ಪ್ರಶಂಸೆ ವ್ಯಕ್ತ ಪಡಿಸಿದರು. ವಿಕಲಚೇತನರು ಉದ್ಯಮಿಗಳಾಗಿ ಬೆಳೆದು ಸ್ವಂತ ಕಾಲಿನಲ್ಲಿ ನಿಲ್ಲಿಬೇಕು ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಕೆ.ಚವ್ಹಾಣ್ ಮಾತನಾಡಿ, ಸಮರ್ಥನಂ ಸಂಸ್ಥೆಯು ಯುವ ವಿಕಲಚೇತನರ ಸಬಲೀಕರಣ ಮಾಡುವ ಉದ್ದೇಶದಿಂದ ಬಾಕ್ರ್ಲೇನ್ ಸಹಕಾರದೊಂದಿಗೆ ಭಾರತ ದೇಶಾದ್ಯಂತ ಯುವ ವಿಕಲಚೇತನರಿಗಾಗಿ ಸರಣಿ ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದ್ದಾರೆ ಸಮರ್ಥನಂ ಸಂಸ್ಥೆಗೆ ಜಿಲ್ಲಾಡಳಿತ ಪರವಾಗಿ ಅಭಿನಂದನೆ ತಿಳಿಸುತ್ತೇವೆ ಎಂದು ತಿಳಿಸಿದರು
ಸಮರ್ಥನಂ ಅಂಗವಿಕಲರ ಸಂಸ್ಥೆಯ ಮಲ್ಲಿಕಾರ್ಜುನ ನಾಡಗೌಡ, ಮಾತನಾಡಿ ಸಮರ್ಥನಂ ಅಂಗವಿಕಲ ಸಂಸ್ಥೆಯು 1997 ರಿಂದ ಭಾರತದಲ್ಲಿನ ದೃಷ್ಟಿ ಹೀನರ, ಅಂಗವಿಕಲರ ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಲಿದೆ. ಪ್ರಮುಖವಾಗಿ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ಊನಶಕ್ಥರ ವಯಕ್ತಿಕ ಸ್ವಾವಲಂಬನೆಯನ್ನು ಸಾಧಿಸುವದಾಗಿದೆ ಮತ್ತು ಸಮಾಜದಲ್ಲಿ ತಮ್ಮದೇ ಆಗಿರತಕ್ಕಂತಹ ಪ್ರಮುಖ ಹೆಜ್ಜೆಯನ್ನು ಇಡುವಲ್ಲಿ ಸಹಾಯಮಾಡುವತ್ತ ಕಾರ್ಯನಿರ್ವಹಿಸುತ್ತಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆಯ 25 ವರ್ಷ ಬೆಳ್ಳಿ ಹಬ್ಬದ ಪ್ರಯುಕ್ತ ದೇಶದ್ಯಾಂತ ಒಟ್ಟು 65 ವಿಕಲಚೇತನರ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಸದರಿ ಉದ್ಯೋಗ ಮೇಳದಲ್ಲಿ 468ಕ್ಕೂ ಹೆಚ್ಚು ವಿಕಲಚೇತನರರು ಭಾಗವಹಿಸಿದು,ಇದರಲ್ಲಿ 120ಕ್ಕೂ ಹೆಚ್ಚು ವಿಕಲಚೇತನರು ಸ್ಥಳದಲ್ಲೇ ಆಯ್ಕೆಯಾಗಿರುತ್ತಾರೆ. 180ಕ್ಕೂ ಹೆಚ್ಚು ವಿಕಲಚೇತನರು ಎರಡನೇ ಹಂತದ ಸಂದರ್ಶನಕ್ಕೆ ಅಯ್ಕೆಯಾಗಿದ್ದಾರೆ. 25ಕ್ಕೂ ಹೆಚ್ಚು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಭಾಗವಹಿಸಿದರು. ಸದರಿ ಕಾರ್ಯಕ್ರಮದಲ್ಲಿ ಸಮರ್ಥನಂ ಸಂಸ್ಥೆಯ ಬೆಳಗಾವಿ ವಿಭಾದ ಮುಖ್ಯಸ್ಥ ಅರುಣ್ ಕುಮಾರ್, ದೇವರಾಜು, ಮಲ್ಲಿಕಾರ್ಜುನ ನಾಡಗೌಡ, ಪಂಡಿತ್, ಶಿವರಾಜು ಮೈಸೂರು ಸೇರಿದಂತೆ ಮತ್ತಿತ್ತರು ಭಾಗವಹಿಸಿದರು.