ವಿಕಲಚೇತನರ ಪುನಶ್ಚೇತನ ಕೇಂದ್ರದಲ್ಲಿ ತುಳಸಿ ವಿತರಣೆ ಕಾರ್ಯಕ್ರಮ

ವಿಜಯಪುರ ಜು.18- ಜಲನಗರದಲ್ಲಿರುವ ವಿಕಲಚೇತನರ ಪುನಶ್ಚೇತನ ಕೇಂದ್ರದಲ್ಲಿ ಇಂದು ಶ್ರೀ ರಾಘವೇಂದ್ರ ಸ್ವಾಮಿಗಳ ಮೂರ್ತಿಯೊಂದಿಗೆ ನಗರ ಸಂಕೀರ್ತನೆ, ಅಷ್ಟೋತ್ತರ ಪಾರಾಯಣ ಹಾಗೂ ತುಳಸಿ ವಿತರಣೆ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮವು ಶ್ರೀ ಕಲ್ಪವೃಕ್ಷ ಪಾರಾಯಣ ಸಂಘ, ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಕಲಚೇತನ ಕೇಂದ್ರ ಇವರ ಸಹಯೋಗದೊಂದಿಗೆ ನೆರವೇರಿತು.
ವಿಕಲಚೇತನರ ಪುನಶ್ಚೇತನ ಕೇಂದ್ರದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ರಾಯರ ವಿಶೇಷ ಆಶೀರ್ವಾದವಾಗಲಿ ಎಂಬ ಉದ್ದೇಶದಿಂದ ಕೇಂದ್ರದ ಮುಖ್ಯಸ್ಥ ಪ್ರಶಾಂತ ದೇಶಪಾಂಡೆಯವರು ಪ್ರತಿವರ್ಷ ರಾಯರ ಅಷ್ಟೋತ್ತರ ಆಯೋಜನೆ ಮಾಡುತ್ತಲಿರುವರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ (ಕೆಆರ್‍ಬಿಕೆ ಸಂಘ) ರಾಜ್ಯಾಧ್ಯಕ್ಷ ಆನಂದ ಜೋಶಿ ಮತ್ತು ವಿಜಯಪುರ ರೋಟರಿ ಜಿಲ್ಲಾ ಅಧ್ಯಕ್ಷ ಜಿ.ಎಸ್.ಕುಲಕರ್ಣಿಯವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಆರ್.ಬಿ.ಕೆ.ಸಂಘದ ರಾಜ್ಯಾಧ್ಯಕ್ಷ ಆನಂದ ಜೋಶಿಯವರು `ವಿಜಯಪುರದಲ್ಲಿ ವಿಕಲಚೇತನರಿಗಾಗಿ ಶಾಲೆ ನಡೆಸುತ್ತಿರುವ ಪ್ರಶಾಂತ ದೇಶಪಾಂಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಪ್ರಶಂಸಾರ್ಹವಾಗಿದೆ, ಅಷ್ಟೋತ್ತರ ಪಾರಾಯಣದಿಂದ ಎಲ್ಲ ಮಕ್ಕಳು ರಾಯರ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ’ ಎಂದು ನುಡಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇಂದಿನ ಅಷ್ಟೋತ್ತರ ಪಾರಾಯಣದಲ್ಲಿ ಗೋವಿಂದ ದೇಶಪಾಂಡೆ, ಬಂಡಾಚಾರ್ಯ ಗಲಗಲಿ, ಎಸ್.ವಿ.ದಿಕ್ಷೀತ, ಕೆ.ಎಸ್.ಜಹಾಗೀರದಾರ, ಮುಕುಂದ ಇಲ್ಲಾಳ, ಕಿಶೋರ ಓಂಕಾರ, ಗುರುರಾಜ ಜಹಾಗೀರದಾರ, ಎಸ್.ಎಂ.ದೇಸಾಯಿ, ಶ್ರೀಕೃಷ್ಣ ಕುಲಕರ್ಣಿ, ದಿಗಂಬರ ದೇಶಪಾಂಡೆ, ಹಣಮಂತ ಕುಲಕರ್ಣಿ, ಕೃಷ್ಣಾ, ಮಹಿಪತಿ ದೇಶಪಾಂಡೆ, ಪವನ ಜೋಶಿ, ಯಲಗೂರೇಶ ಕುಲಕರ್ಣಿ, ಪಾಂಡುರಂಗಾಚಾರ್ಯ ಕಾವಿ, ಕೆ.ಬಿ.ಕುಲಕರ್ಣಿ, ರಾಜೇಂದ್ರ ಜೋಶಿ, ಸುಧೀಂದ್ರ ಕುಲಕರ್ಣಿ, ಆನಂದ ಕುಲಕರ್ಣಿ, ಉಲ್ಲಾಸ ಪಾಟೀಲ ಹಾಗೂ ಎಲ್ಲ ವಿಕಲಚೇತನ ವಿದ್ಯಾರ್ಥಿಗಳು, ಅವರ ಪಾಲಕರು, ಸಂಸ್ಥೆಯ ಶಿಕ್ಷಕವರ್ಗ ಪಾಲ್ಗೊಂಡಿದ್ದರು.