ವಿಕಲಚೇತನರ ಕ್ರೀಡಾಕೂಟ ಉದ್ಘಾಟನೆ

ಗುಳೇದಗುಡ್ಡ ನ.24- ಗ್ರಾಮ ಪಂಚಾಯತ ವತಿಯಿಂದ ಶೇ5 ಅನುದಾನದಲ್ಲಿ ವಿಕಲಚೇತನರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಣ ಇಲಾಖೆ, ಕಂದಾಯ ಇಲಾಖೆಯಿಂದ ಸರಕಾರದ ಸೌಲಭ್ಯಗಳನ್ನು ತಲುಪಿಸಿರಿ ಎಂದು ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ, ಹಾಲಿ ಸದಸ್ಯ ಸಂಜೀವ ಚಿಮ್ಮನಕಟ್ಟಿ ಹೇಳಿದರು.
ಅವರು ತಾಲೂಕಿನ ಜಮ್ಮನಕಟ್ಟಿ ಗ್ರಾಮದ ಶ್ರೀ ಬಿ.ಬಿ.ಚಿಮ್ಮನಕಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಬೆಥಣಿ ಸಂಜೀವಿನಿ ಕೇಂದ್ರ ಗುಳೇದಗುಡ್ಡ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಗಂಗಯ್ಯ ಹಿರೇಮಠ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸ್ಥಳೀಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಎಸ್.ಅಂಬಣ್ಣವರ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎನ್.ಡಿ.ಬೀಳಗಿ, ಎಚ್.ಆರ್.ಕಡಿವಾಲ, ಕೆ.ಎಸ್.ಮಸಬಿನಾಳ, ಸ್ಥಳೀಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಂ.ಬಿ.ಹಾಲಿಗೇರಿ, ಹುಲಸಗೇರಿ ಶಾಲೆಯ ಮುಖ್ಯಶಿಕ್ಷಕ ಕಿವುಡಜಾಡರ, ಬೆಥಣಿ ಸಂಜೀವಿನಿ ಕೇಂದ್ರದ ಸಂಯೋಜಕ ಆರೋಗ್ಯ ಸ್ವಾಮಿ ಝಳಕಿ, ನಿರ್ದೇಶಕ ಸಿಸ್ಟರ್ ಮಿಶಲ್, ಕಾರ್ಯಕರ್ತೆಯರಾದ ದಾನಮ್ಮ ದೇವನಾಳ, ದ್ಯಾಮವ್ವ ಕಟಾಪೂರ, ಲಕ್ಷ್ಮೀ ಕಲ್ಲೂರ ಹಾಜರಿದ್ದರು. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಎಸ್.ಎಸ್.ಚೌಕದ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ನಂತರ ವಿಕಲಚೇತನ ಮಕ್ಕಳಿಗಾಗಿ ಚಮಚದಲ್ಲಿ ನಿಂಬೆ ಹಣ್ಣು ಬಾಯಲ್ಲಿ ಇಟ್ಟುಕೊಂಡು ನಡೆಯುವ ಸ್ಪರ್ಧೆ, ಮ್ಯೂಜಿಕಲ್ ಚೇರ್, ಬಾಲ್ ಒಗಿಯುವುದು, ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪಾಲಕರು, ವಿಕಲಚೇತನರು, ಪ್ರೌಢಶಾಲೆಯ ಶಿಕ್ಷಕರು ಹಾಜರಿದ್ದರು.