ವಿಕಲಚೇತನರು, ಹಿರಿಯ ನಾಗರಿಕರಿಗೆ ತಪಾಸಣಾ ಶಿಬಿರ

ಹನೂರು : ಜು.19:- ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಚಾಮರಾಜನಗರ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಾಗೂ ಅಲಿಮ್ಕೋ ಸಂಸ್ಥೆ ( ಆರ್ಟಿಫಿಶಿಯಲ್ ಮನುಫ್ಯಾಕ್ಚರಿಂಗ್ ಕಾಪೆರ್Çರೇಷನ್ ಆಫ್ ಇಂಡಿಯಾ) ಬೆಂಗಳೂರು ಇವರ ಸಹಯೋಗದೊಂದಿಗೆ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಗಳಿಗೆ ಸಾಧನ ಸಲಕರಣ ಒದಗಿಸುವ ಸಲುವಾಗಿ ತಪಾಸಣಾ ಶಿಬಿರ ನಡೆಯಿತು.
ಹನೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸಲಕರಣೆಗಳ ವಿತರಣೆ ಸಲುವಾಗಿ ಹಮ್ಮಿಕೊಂಡಿದ್ದ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಶಾಸಕ ನರೇಂದ್ರ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ನರೇಂದ್ರ ಅವರು ಮಾತನಾಡಿ ಇದು ಕೇಂದ್ರ ಸರ್ಕಾರ ಯೋಜನೆಯಾಗಿದೆ ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು ಹನೂರು ತಾಲೂಕಿನ ಎಲ್ಲಾ ವಿಚಲ ಚೇತನರು ಮತ್ತು ಹಿರಿಯ ನಾಗರಿಕರು ಒಂದು ತಪಾಷಣೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ವಿಕಲಚೇತನರು ಒಂದು ಶಾಪವಲ್ಲ ಇದು ಆಕಸ್ಮಿಕ ಅಷ್ಟೇ, ಹುಟ್ಟಿನಿಂದ ಯಾರೂ ಅಂಗವಿಕಲರ ಆಗುವುದಿಲ್ಲ ಕೆಲವರು ಆಕ್ಸಿಡೆಂಟಲ್ಲಿ, ಅಂಗವಿಕಲತೆ ಯಾಗುತ್ತಿದೆ ಅಂತವರಿಗೆ ಈ ಶಿಬಿರದಲ್ಲಿ ತಪಾಸಣೆ ಮಾಡಿ ಸಲಕರಣೆಗಳನ್ನು ವಿತರಿಸಿ ಬೇರೆಯವರ ರೀತಿ ಅವರು ಸಹ ನಡೆಯಬೇಕು, ಕಿವಿ ಕೇಳಿಸುವಂತೆ ಬೇಕು ಎಲ್ಲರ ರೀತಿಯಲ್ಲೂ ಅವರು ಸಹ ಮುಂದಾಗಬೇಕು.
ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಮೂಳೆ ತಜ್ಞರು,ನೇತ್ರ ತಜ್ಞರು, ಶ್ರವಣದೋಷ,ಅಂಗಾಂಗ ಜೋಡಣೆ ಎಲ್ಲಾ ವೈದ್ಯರು ಭಾಗಿಯಾಗಿದ್ದಾರೆ,ಈ ಕಾರ್ಯಕ್ರಮದಲ್ಲಿಸುಮಾರು 1000ರಿಂದ 1500 ಜನರು ಬಂದಿದ್ದಾರೆ, ಕಾರ್ಯಕ್ರಮದಲ್ಲಿ ಸಿಗುವ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಸಮಾಜದಲ್ಲಿ ಎಲ್ಲರಂತೆ ಸಮಾನತೆಯಿಂದ ಅಂಗವಿಕಲತೆಯನ್ನು ಮರೆತು ಬದುಕಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾ.ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆಎಂ.ಗಾಯತ್ರಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಗೀತಾ, ಡಿಎಚ್‍ಒ ವಿಶ್ವೇಶ್ವರಯ್ಯ, ಹನೂರು ತಹಸಿಲ್ದಾರ್ ಆನಂದಯ್ಯ, ಜಿಲ್ಲಾ ಉಪನಿರ್ದೇಶಕರು ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಗೀತಾ ಲಕ್ಷ್ಮಿ, ಇಒ ಧರಣೇಶ್ ಸೇರಿದಂತೆ ವಿಧ ಇಲಾಖೆಯ ಅಧಿಕಾರಿಗಳು ಇದ್ದರು.