ವಿಕಲಚೇತನರು ಹಾಗೂ ಹಿರಿಯ ನಾಗರಿಕರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಕೋವಿಡ್ ಲಸಿಕೆ ಪಡೆಯಲು ಸೂಚನೆ

ಕಲಬುರಗಿ,ಮೇ.26:ಕಲಬುರಗಿ ಜಿಲ್ಲೆಯ ಎಲ್ಲಾ 18 ರಿಂದ 44 ಹಾಗೂ 45 ರಿಂದ ಮೇಲ್ಪಟ್ಟ ವಯೋಮಾನದ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಕೋವಿಡ್ ಲಸಿಕೆಯನ್ನು ಪಡೆಯಬೇಕೆಂದು ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ಪಡೆಯಲು ಸರ್ಕಾರವು ಆದ್ಯತೆ ಗುಂಪೆಂದು ಗುರುತಿಸಿದ್ದು, ಕೋವಿಡ್-19 ಲಸಿಕಾಕರಣಕ್ಕಾಗಿ ಎಲ್ಲಾ ತಾಲೂಕಾ ಅಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಪ್ರ.ಆ.ಕೇಂದ್ರ, ಸ.ಆ.ಕೇಂದ್ರ, ಜಿ.ಜಿ.ಹೆಚ್, ನಗರ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದ್ದು, ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಈ ಕೆಳಕಂಡ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು/ ನೂಡಲ್ ಅಧಿಕಾರಿಗಳನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.

ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.) ರಾದ  ಅಫಜಲಪೂರ ಮೊಬೈಲ್ ಸಂಖ್ಯೆ 9448808141,  ಆಳಂದ ಮೊಬೈಲ್ ಸಂಖ್ಯೆ 94830544953,  ಚಿಂಚೋಳಿ ಮೊಬೈಲ್ ಸಂಖ್ಯೆ 9880671171, ಚಿತ್ತಾಪೂರ ಮೊಬೈಲ್ ಸಂಖ್ಯೆ 9845204328,  ಜೇವರ್ಗಿ ಮೊಬೈಲ್ ಸಂಖ್ಯೆ  9741875881, ಕಲಬುರಗಿ ಮೊಬೈಲ್ ಸಂಖ್ಯೆ 9972079714  ಹಾಗೂ ಸೇಡಂ ಮೊಬೈಲ್ ಸಂಖ್ಯೆ 9902417925 ಗಳಿಗೆ ಸಂಪರ್ಕಿಸಬೇಕು.  ಅದೇ ರೀತಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ತಾಲೂಕು ನೋಡಲ್ ಅಧಿಕಾರಿಗಳು ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಅಫಜಲಪೂರ, ಆಳಂದ, ಚಿತ್ತಾಪೂರ, ಶಾಹಾಬಾದ, ಕಾಳಗಿ, ಚಿಂಚೋಳಿ, ಜೇವರ್ಗಿ, ಕಲಬುರಗಿ ಹಾಗೂ  ಸೇಡಂ ಇವರನ್ನು ಸಂಪರ್ಕಿಸಬಹುದಾಗಿದೆ.