ವಿಕಲಚೇತನರು ಸರಕಾರದ ಸೌಲಭ್ಯ ಪಡೆದು ಸ್ವಾಲಂಬನೆಯಾಗಿ ಜೀವನ ಸಾಗಿಸಬೇಕುಃ ವ್ಹಿ.ಜಿ ಉಪಾಧ್ಯ

ವಿಜಯಪುರ, ಜ.8-ಮಹಾನಗರ ಪಾಲಿಕೆ ವಿಜಯಪುರ ಹಾಗೂ ಬಿಜಾಪೂರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಇವರುಗಳು ಸಹಯೋಗದೊಂದಿಗೆ ನಗರ ಪ್ರದೇಶದಲ್ಲಿರುವ ವಿಕಲಚೇತನರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನಗರದ ಬಿಜಾಪೂರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ (ಖೇಡ ಕಾಲೇಜ್ ಆವರಣ) ದಲ್ಲಿ ಜರಗಿತು.
ಈ ಕಾರ್ಯಕ್ರವನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ಸಬಲೀಕರಣ ಇಲಾಖೆ ಅಧಿಕಾರಿಳಾದ ವ್ಹಿ.ಜಿ ಉಪಾಧ್ಯೆ ನಮ್ಮ ಇಲಾಖೆಯಿಂದ ವಿಕಲಚೇತನರಿಗಾಗಿ ಸಾಕಷ್ಟು ಯೋಜನೆಗಳನ್ನು ದೋರಕಿಸಿಕೋಡುತ್ತೇನೆ. ಮುಂಬರುವ ದಿನಗಳಲ್ಲಿ ಸರಕಾರವು ಇನ್ನೂ ಹೊಸ ಯೋಜನೆಗಳನ್ನು ಜಾರಿಗೆ ಮಾಡುತ್ತಾರೆ ಆ ಯೋಜನೆಗಳನು ಪಡೆದು ಸ್ವಾಲಂಬನೆಯಾಗಿ ಜೀವನ ಸಾಗಿಸಬೇಕೆಂದು ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ಮಹಾನಗರ ಪಾಲಿಕೆಯ ಮಾಜಿ ಮೇಯರಾದ ಶ್ರೀಮತಿ ಲಕ್ಷ್ಮೀ ಕನ್ನೂಳ್ಳಿ ವಿಕಲಚೇತನರು ನೇರವಾಗಿ ಇಲಾಖೆಗೆ ಬೇಟ್ಟಿ ನೀಡಿ ತಮ್ಮ ಸೌಲಭ್ಯವನ್ನು ಪಡೆದುಕೊಳ್ಳುವ ಸಲಹೆ ನೀಡಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಗುರುಶಾಂತ ಹಿರೇಮಠವರು ವಿಕಲಚೇತನರ 2016ರ ಕಾನೂನು ಕಾಯ್ದೆ ಮತ್ತು ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿಸಿದರು.
ಅಶೋಕ ವಾಲಿಕಾರ, ಅಂಬಣ್ಣ ಗುನ್ನಾಪೂರ, ಶಂಕ್ರೇಮ್ಮ ಕೋರಿ, ಸಾಗರ ಸಾವಳಗಿ, ಯಲ್ಲಮ್ಮ ಜಾದವ, ಜಿ.ಎಂ.ಬಿರಾದಾರ, ಎಸ್ ಆರ್ ಪಾಟೀಲ್ ಅಂಗನವಾಡಿ ಶಿಕ್ಷಕರಾದ ಶ್ರೀಮತಿ ಕಮಲ ಕಾಂಬಳೆ, ಶಾಹೀನ ರೊಜಿವಾಲೆ, ಛಾಯಾ ಹಜೇರಿ, ಜರೀನಾ ಸೊನ್ನದ, ಶಬನಾ ಮನಿಯಾರ, ಪ್ರೀಯಾಂಕಾ ಚವ್ಹಾಣ, ರೂಪಾ ಹಂಜಗಿ, ಪ್ರಮೀಳಾ ಬಜಂತ್ರಿ, ಆರತಿ ಸಪ್ತಳಕರ, ಅಮೀನಾ ಡಾಲಯತ, ಸಿ ಆರ್ ಕಾಂಬಳೆ ಮತ್ತು ಎಸ್ ಐ ಪತ್ತಾರ ಇನ್ನೂ ಮುಂತಾದವರು ಭಾಗವಹಿಸಿದ್ದರು.
ರಾಜ್ಯ ಪುರಸ್ಕ್ರತರಾದ ಮಲ್ಲಿಕಾರ್ಜುನ ಬಿ ಉಮರಾಣಿಯವರು ಕಾರ್ಯಕ್ರವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.