
ಹುಬ್ಬಳ್ಳಿ,ಆ25: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ಯುಡಿಐಡಿ ಕಾರ್ಡ್ ಅವಶ್ಯಕವಾಗಿದೆ. ಹೀಗಾಗಿ ವಿಕಲಚೇತನರು ಕಡ್ಡಾಯವಾಗಿ ಯುಡಿಐಡಿ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕು ಎಂದು ಎಂಆರ್ ಡಬ್ಲೂ ಮಹಾಂತೇಶ ಕುರ್ತಕೋಟಿ ಹೇಳಿದರು.
ತಾಲೂಕಿನ ಕಟ್ನೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗವಿಕಲರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್ ವಿತರಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುಡಿಐಡಿ ಕಾರ್ಡ್ ಪಡೆದುಕೊಳ್ಳುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ ಎಂದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಗೀತಾ ಬಾನಿ ಮಾತನಾಡಿ, ಗ್ರಾಮದ ಎಲ್ಲ ವಿಕಲಚೇತನರು ಯುಡಿಐಡಿ ಕಾರ್ಡ್ ನಿಂದ ಸರಕಾರದ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷಚೇತನರಿಗೆ ಯುಡಿಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ನಿಂಗಪ್ಪ ಕೆಲಗೇರಿ, ಗ್ರಂಥಪಾಲಕಿ ಮಾಹಾದೇವಿ ಹಡಪದ, ವಿಜಯಲಕ್ಷ್ಮೀ ಹಳ್ಳೂರ, ವಿ ಆರ್ ಡಬ್ಲೂ ಆಸೀಫ್ ನಾಗನೂರ, ಸೇರಿದಂತೆ ವಿಕಲಚೇತನರು, ಗ್ರಾಮ ಪಂಚಾಯತಿ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.