ವಿಕಲಚೇತನರು ಮತದಾನದಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಮನವಿ

ಯಾದಗಿರಿ : ಮೇ 04 : ಕರ್ನಾಟಕ ವಿಧನಸಭಾ ಸಾರ್ವತ್ರಿಕ ಚುನಾವಣೆ-2023 ಘೋಷಣೆಯಾಗಿದೆ. ಪ್ರಜಾಪ್ರಭುತ್ವ ಯಶಸ್ವಿಗೆ ಚುನಾವಣೆ ಅತ್ಯಂತ ಮುಖ್ಯ ಘಟ್ಟ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾ ಸರ್ಕಾರ ರಚಿಸಬೇಕಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ನಮ್ಮಿಂದ ಪ್ರಜಾಪ್ರಭುತ್ವ ಅದಕ್ಕಾಗಿ ನಾವು ಸಕ್ರೀಯವಾಗಿ ಹೆಮ್ಮೆಯಿಂದ ಮತದಾನದಲ್ಲಿ ಭಾಗವಹಿಸಬೇಕಿದೆ. ಪ್ರಜಾಪ್ರಭುತ್ವವನ್ನು ಬಲಗೊಳಿಸುವಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕೆಂದು ಮನವಿ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ, ಎಂದು ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ತಿಳಿಸಿದ್ದಾರೆ.

  ಈ ಪ್ರಸಕ್ತ ಚುನಾವಣೆಯಲ್ಲಿ ವಿಕಲಚೇತನರಿಗೆ ಚುನಾವಣಾ ಆಯೋಗ ಅಗ್ರ ಪ್ರಾಶಸ್ತ್ಯ ನೀಡಿದೆ. ವಿಕಲಚೇತನರಿಗೆ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಚುನಾವಣೆ ಆರಂಭವಾಗುದಕ್ಕಿಂತ ಪೂರ್ವದಲ್ಲಿ ಎಲ್ಲ ವಿಕಲಚೇತನರ ಹೆಸರುಗಳನ್ನು ಮತಗಟ್ಟೆವಾರು ಕ್ರೋಡಿಕರಿಸಲಾಗಿದೆ. ನಿಮಗಾಗಿ ಮತಗಟ್ಟೆಯಲ್ಲಿ ರ್ಯಾಂಪ್ ನಿರ್ಮಿಸಲಾಗಿದೆ. ಗಾಲಿ ಕುರ್ಚಿ ವ್ಯವಸ್ಥೆ ಕಲ್ಪಿಸಿದೆ, ದೃಷ್ಟದೋಷವುಳ್ಳ ವಿಲಚೇತನರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಬ್ರೈಲ್ ಲಿಪಿಯಲ್ಲಿ ಮುದ್ರಿತವಾದ ಭಾಗವಹಿಸಿದ ಅಭ್ಯರ್ಥಿಗಳ ಕ್ರಮ ಸಂಖ್ಯೆ, ಹೆಸರು, ಚಿನ್ಹೆ ವಿರುವ ಮಾದರಿ ಬ್ಯಾಲೆಟ್ ಪ್ರತಿ ವ್ಯವಸ್ಥೆ ಕಲ್ಪಿಸಿದೆ, ಶ್ರವಣದೊಷವುಳ್ಳವರಿಗೆ ಸನ್ನೆಭಾಷೆಯಲ್ಲಿ ಸಹಕರಿಸಲು ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಮತದಾನ ದಿನದಂದು ವಿಕಲಚೇತನರಿಗೆ ಸರತಿ ಸಾಲಿನಲ್ಲಿ ನಿಂತು ಕಾಯದೆ ಮತದಾನಕ್ಕೆ ಪ್ರಥಮ ಅವಕಾಶ ಕಲ್ಪಿಸಲಾಗಿದೆ. ವಿಕಲಚೇತನರಿಗೆ ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಸಹಾಯಕ್ಕಾಗಿ ಮತದಾನ ಕೇಂದ್ರಕ್ಕೆ ಒಬ್ಬರಂತೆ ಸಹಾಯಕರನ್ನು ನೇಮಿಸಲಾಗಿದೆ. ತೀವ್ರ ತೆರೆನಾದ ವಿಕಲತೆ ಹೊಂದಿದವರಿಗೆ ತಮ್ಮ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

 ವಿಕಲಚೇತನರೆಂದರೆ ವಿಶೇಷ ಚೇತನವುಳ್ಳವರು, ಈ ವಿಶೇಷ ಚೇತನಗಳಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸುವುದರ ಮೂಲಕ ಚೈತ್ಯನ್ಯ ತುಂಬಬೇಕಾಗಿದೆ. ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ ಎಂಬ ಮಾತನ್ನು ಸಾಧಿಸಬೇಕಿದೆ. ಹೀಗಾಗಿ ಕಡ್ಡಾಯವಾಗಿ ವಿಕಲಚೇತನರೆಲ್ಲರೂ ಮತದಾನ ಮಾಡಿ ತಮ್ಮ ವಿಶೇಷಚೇತನವನ್ನು ಪ್ರಜಾಪ್ರಭುತ್ವಕ್ಕೆ ನೀಡಲು ವಿನಂತಿಸುತ್ತೇನೆ.ಇಲ್ಲಿ ಎಲ್ಲರ ಮತವು ಅಮೂಲ್ಯ ಹಾಗೂ ಅನನ್ಯ ನಿಮ್ಮ ಮತ ಚಲಾಯಿಸಿ. ಯಾವುದೇ ಆಮಿಷಕ್ಕೆ ಒಳಗಾಗದಿರಿ, ಮರುಳಾಗದಿರಿ, ನಿಮ್ಮದು ಅಮೂಲ್ಯವಾದ ಮತ, ಮತ ಪ್ರಜಾಪ್ರಭುತ್ವದ ಶಕ್ತಿ, ಯೋಚಿಸಿ ಮತಚಲಾಯಿಸಿ, ಮತ ಚಲಾವಣೆ ನಿಮ್ಮ ಹಕ್ಕು, ಮತದಾನ ದಿನ 2023ರ ಮೇ 10ರ ಬುಧವಾರ ರಂದು ತಪ್ಪದೇ ಮತ ಚಲಾಯಿಸಲು ಕೋರಿದೆ. ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.