ವಿಕಲಚೇತನರು ಎಲ್ಲರಂತೆ ಬದುಕಲಿ

ಬೆಂಗಳೂರು, ಮಾ.೨೭- ವಿಕಲಚೇತನರು ಸಹ ಎಲ್ಲರಂತೆ ಜೀವನ ಸಾಗಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ತಲುಪಬೇಕು ಎಂದು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ನುಡಿದರು.
ನಗರದಲ್ಲಿಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚಾಮುಂಡಿನಗರದ ಟ್ರಲ್ಲಿಯಂ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಪಾಲಿಕೆ ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತರಿಗೆ ೨೪ ತ್ರಿಚಕ್ರ ವಾಹನಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೇಷನ್ ,ಮಾಸ್ಕ್ ಕೊಡುವುದು ವಿಶೇಷವಲ್ಲ ವಿಕಲಚೇತನರು ಸಹ ನಮ್ಮಂತೆ ಸಮಾಜವನ್ನು ನೋಡಬೇಕು ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಿಗಬೇಕು ವಿಕಲಚೇತನರು ಸಹ ಎಲ್ಲರಂತೆ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಅಬ್ದುಲ್ ವಾಜಿದ್ ಮಾತನಾಡಿ, ಹುಟ್ಟು ಅಕಸ್ಮಿಕ ಸಾವು ಖಚಿತ ನಾವು ಮಾಡುವ ಕೆಲಸ ಶಾಶ್ವತ. ವಿಕಲಚೇತನರು ಸಾಮಾನ್ಯ ಜನರಂತೆ ಜೀವನ ಸಾಗಿಸಬೇಕು.ಅವರು ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ,ಹೆಬ್ಬಾಳ ಕಾಂಗ್ರೆಸ್ ವಿವಿಧ ಘಟಕದ ಅಧ್ಯಕ್ಷರು ,ಪದಾಧಿಕಾರಿಗಳು ಪಾಲ್ಗೊಂಡಿದ್ದರು.