ವಿಕಲಚೇತನರಿಗೆ 20 ತ್ರೀಚಕ್ರ ಬೈಕ್ ವಿತರಣೆ


ಸಂಜೆವಾಣಿ ವಾರ್ತೆ
ಸಂಡೂರು ;ಜ:10 ಸಂಡೂರು ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ತಾಲ್ಲೂಕಿನ ಕೃಷ್ಣಾನಗರ ಗ್ರಾಮದ ಶಾಸಕರ ಆವರಣದಲ್ಲಿ ಕುದುರಮುಖ ಕಬ್ಬಿಣದ ಗಣಿ ಕಂಪನಿ ಸಿ.ಎಸ್.ಆರ್. ಅನುದಾನದಲ್ಲಿ ವಿಕಲ ಚೇತನರಿಗೆ 20 ತ್ರಿಚಕ್ರ ಬೈಕ್‍ಗಳನ್ನ ಕುದುರೆಮುಖ ಗಣಿ ಕಂಪನಿಯ ಅಧಿಕಾರಿಗಳ ನೇತೃತ್ವದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರು, ಸಿ.ಪಿ.ಎಲ್. ಕಾರ್ಯದರ್ಶಿಗಳಾದ ಈ .ತುಕರಾಮ್ ರವರು ತಮ್ಮ ಸಿಬ್ಬಂದಿಯವರ ಜೊತೆಗೂಡಿ ವಿತರಿಸಿದರು.