ವಿಕಲಚೇತನರಿಗೆ ಹಣ್ಣು ಹಂಪಲು ವಿತರಣೆ

ರಾಯಚೂರು.ಮಾ.೨೮-ರೋಟರಿ ಕ್ಲಬ್ ಕಾಟನ್ ಸಿಟಿ ಸಂಸ್ಥೆಯ ವತಿಯಿಂದ ವಿಕಲಚೇತನ ಮಕ್ಕಳಿಗೆ ಆಹಾರ ಕಿಟ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ರೋಟರಿ ಕ್ಲಬ್ ಕಾಟನ್ ಸಿಟಿ ಸಂಸ್ಥೆಯ ವತಿಯಿಂದ ನಗರದ ಮಾಣಿಕ್ ಪ್ರಭು ಅಂದ ಮಕ್ಕಳ ವಸತಿ ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸ್ಟಡಿ ಮೆಟೀರಿಯಲ್ಸ್,ಡ್ರಾಯಿಂಗ್ ಶೀಟ್, ಸಾಬೂನು, ಬ್ರಶ್, ಟೂತ್ ಪೇಸ್ಟ್, ಸೇರಿದಂತೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಮುನಿಸ್ವಾಮಿ, ಪ್ರಭನ್ ಗೌಡ ಹಂಚಿನಾಳ, ಗುರುಲಿಂಗಪ್ಪ, ಶಿವ ರೀಶ್, ವೇಣುಗೋಪಾಲ, ವಿಜಯ ಭಾಸ್ಕರ್, ವಿಠಲ್ ಪ್ರಸಾದ್ ಬಾಬು ಗೌಡ, ಶರಣ ಗೌಡ,ಎಂ.ಕೆ.ವೆಂಕಣ್ಣ, ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.