ವಿಕಲಚೇತನರಿಗೆ ಸ್ಕೂಟಿ ವಿತರಣೆ

ಕೋಲಾರ,ಮಾ,೨೮- ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಅಂಗವಿಕಲ ಕ್ಷೇಮಾಭಿವೃದ್ದಿ ಇಲಾಖೆಯ ವತಿಯಿಂದ ನಗರದ ಡೊಮ್ ಲೈಟ್ ವೃತ್ತದಲ್ಲಿನ ಕೆ.ಇ.ಬಿ.ಗಣೇಶ ಗುಡಿಯ ಅವರಣದಲ್ಲಿ ಜಿಲ್ಲೆಯ ೬ ತಾಲ್ಲೂಕಿನ ಒಟ್ಟು ೨೧ ವಿಕಲಚೇತನ ಫಲಾನುಭಿಗಳಿಗೆ ಮೂರು ಚಕ್ರದ ಸ್ಕೂಟಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಶ್ರೀನಿವಾಸಪುರದ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, ಮಾಲೂರಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮೇಗೌಡ ಹಾಗೂ ಕೋಲಾರದ ಸಮಾಜ ಸೇವಕ ಹಾಗೂ ಜೆ.ಡಿ.ಎಸ್. ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕಿತ್ತಾಂಡೂರು ನಂಜಿಂಡಪ್ಪ, ಜೆ.ಡಿ.ಎಸ್. ಮಾಜಿ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ,
ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯುಕೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ನಿರ್ದೇಶಕ ಮುದ್ದಣ, ಅಂಗವಿಕಲರ ಇಲಾಖೆಯ ಅಧಿಕಾರಿ ಮುನಿರಾಜು ಹಾಜರಿದ್ದರು,