ವಿಕಲಚೇತನರಿಗೆ ವಿಶೇಷ ಮತದಾನ ವ್ಯವಸ್ಥೆ-ಚೇತನ್

ದೇವದುರ್ಗ.ಏ.೧೮- ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎನ್ನುವ ದೃಷ್ಟಿಯಿಂದ ಚುನಾವಣೆ ಆಯೋಗ ವಿವಿಧ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರು, ವಯೋವೃದ್ಧರಿಗೆ ಮನೆಗೆ ತೆರಳಿ ಮನೆಯಲ್ಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಂ.ಎನ್.ಚೇತನ್‌ಕುಮಾರ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಪಂನಿಂದ ಆಯೋಜಿಸಿದ್ದ ಅಂಗವಿಕಲರಿಗೆ ಮತದಾನ ಜಾಗೃತಿ ಹಾಗೂ ವಿಕಲಚೇತನರಿಂದ ಮತದಾನ ಜಾಗೃತಿಗಾಗಿ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಪ್ರತಿಯೊಬ್ಬ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ತಪ್ಪದೆ ಮತದಾನ ಮಾಡಬೇಕು. ಮತಗಟ್ಟೆಗಳಲ್ಲಿ ತ್ರಿಚಕ್ರ ತಳ್ಳುವ ಗಾಡಿ ಮಾಡಲಾಗಿದೆ.
ಮತದಾನ ಮಾಡುವ ಕೇಂದ್ರದಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ, ಬೆಳಕಿನ ಸೌಲಭ್ಯ ಕಲ್ಪಿಸಿದ್ದು, ವಿಕಚೇತನರು, ವಯೋವೃದ್ಧಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೇ ೭ರಂದು ಎರಡನೇ ಹಂತದಲ್ಲಿ ನಮ್ಮ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ. ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಹೇಳಿದರು.
ವಿಕಲಚೇತನರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ್, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾ.ಪಂ. ಇಒ ಬಾಬು ರಾಠೋಡ್, ತಾ.ಪಂ. ಎಡಿ ಅಣ್ಣರಾವ್, ಲೋಕಪ್ಪ ಜಾದವ್ ಇತರರಿದ್ದರು.

೧೮ಡಿವಿಡಿ-೧