ವಿಕಲಚೇತನರಿಗೆ ಲಸಿಕೆ: ಶಾಸಕ ರಾಜೇಶ್ ನಾಯ್ಕ್ ಬೇಟಿ, ಮಾಹಿತಿ

ಬಂಟ್ವಾಳ: ವಿಕಲಚೇತನರಿಗೆ ಲಸಿಕೆ ನೀಡುವ ಕೇಂದ್ರಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಮಾಹಿತಿ ಪಡೆದಕೊಂಡರು.
ಸರ್ಕಾರದ ಸುತ್ತೋಲೆಯಂತೆ ೧೮ ರಿಂದ ೪೪ ವರ್ಷದೊಳಗಿನ ವಿಕಲಚೇತನರು ಹಾಗೂ ಹಾರೈಕೆದಾರರಿಗೆ ಬಂಟ್ಚಾಳ ತಾಲೂಕಿನಲ್ಲಿ ಕೋವಿಡ್ ಲಸಿಕೆ ಇಂದು ನೀಡಲಾಯಿತು.
ಮೇ.೨೮ ಮತ್ತು ೨೯ ರಂದು ಎರಡು ದಿನಗಳ ಕಾಲ ನಡೆಯುವ ಲಸಿಕಾಕರಣದ ಕೇಂದ್ರಕ್ಕೆ ಶಾಸಕರು ಬೇಟಿ ನೀಡಿ ಇಲಾಖೆ ಗುರುತಿಸಿದ ಎಲ್ಲಾ ವಿಕಲಚೇತನರಿಗೆ ಲಸಿಕೆ ನೀಡುವಲ್ಲಿ ಯಾವುದೇ ಲೋಪದೋಷಗಳು ಆಗಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖಾ ಸಿಬ್ಬಂದಿ ಗಳು ಪ್ರತಿಯೊಬ್ಬರನ್ನು ಲಸಿಕೆಯನ್ನು ಪಡೆಯಲು ಸೌಕರ್ಯಗಳನ್ನು ಒದಗಿಸಬೇಕು ಜೊತೆಗೆ ಶಾಸಕರ ವಾರ್ ರೂಮ್ ಕೂಡ ಸಹಕಾರ ನೀಡುತ್ತದೆ ಎಂದರು.
ಸರಕಾರ ಆರಂಭದಲ್ಲಿ ಫ್ರಂಟ್ ಲೈನ್ ವಾರಿಯರ್ ಗಳಿಗೆ ವ್ಯಾಕ್ಸಿನೇಷನ್ ನೀಡಿದ್ದರಿಂದ ಇಲಾಖೆಯ ಸಿಬ್ಬಂದಿಗಳು ಕೊರೊನಾ ಮಾಹಾಮಾರಿಯಿಂದ ಸೇಫ್ ಆಗಲು ಸಾಧ್ಯವಾಯಿತು ಮತ್ತು ನಿಶ್ಚಿಂತೆಯಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಬಿಸಿರೋಡಿನ ಲಯನ್ಸ್ ಸೇವಾ ಮಂದಿರ ಹಾಗೂ ಕಲ್ಲಡ್ಕ ಶ್ರೀರಾಮ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ಪುಂಜಾಲಕಟ್ಟೆ ಇಲ್ಲಿ ಲಸಿಕೆ ಶಿಬಿರ ನಡೆಯುತ್ತಿದ್ದು ಯಾವುದೇ ಸಮಸ್ಯೆ ಗಳಿಲ್ಲದೆ ಉತ್ತಮ ರೀತಿಯ ಸ್ಪಂದನೆ ದೊರೆತಿದೆ ಎಂದು ಬಂಟ್ವಾಳ ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಎಮ್.ಆರ್.ಡಬ್ಲ್ಯೂ ಗಿರೀಶ್ ವಿ.ಆರ್.ಡ್ಬ್ಲೂ ಲೋಕೇಶ್, ಎ.ಸಿ.ಡಿ.ಪಿ.ಒ ಶೀಲಾವತಿ, ಮೇಲ್ವಿಚಾರಕ ಇತರ ಅಲ್ ಭಾರತಿಕುಂದರ್, ಸಿಂಧು, ಶೋಭಾ, ನೀತಾ ಕುಮಾರಿ, ತಾರ, ಯಶೋಧ, ಗುಣವತಿ, ಅಂಗನವಾಡಿ ಕಾರ್ಯಕರ್ತೆಯರಾದ
ಲಲಿತ, ಸೌಮ್ಯ, ಅರುಣಾ, ರೋಹಿಣಿ, ಯಮುನ,ವಿಜಯವಾಣಿ, ನೇತ್ರಾವತಿ, ಭವ್ಯ ಭಂಡಾರಿಬೆಟ್ಟು, ವಸಂತಿಗಂಗಾದರ, ಪುಷ್ಪ ಜಕ್ರಿಬೆಟ್ಟು, ಪಿನ್ನಿ ಡಿ.ಸೋಜ, ಜಯಲಕ್ಷ್ಮಿ ಮೂರ್ಜೆ, ಸುನೀತಾ ಮೇಲ್ಪತ್ತರ, ಗೀತಾ ಕಲಾಬಾಗಿಲು, ವನಿತ ಕೊಳಲಬಾಕಿಮಾರು ಉಪಸ್ಥಿತರಿದ್ದರು.